ಪಾಣೆಮಂಗಳೂರಿನ ವೈದ್ಯ ಕುಟುಂಬಕ್ಕೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶಗೈದು ಜೀವಬೆದರಿಕೆ ಒಡ್ಡಿದ ಇಬ್ಬರು ಆರೋಪಿಗಳು : ಪೊಲೀಸ್ ದೂರು ದಾಖಲು - Karavali Times ಪಾಣೆಮಂಗಳೂರಿನ ವೈದ್ಯ ಕುಟುಂಬಕ್ಕೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶಗೈದು ಜೀವಬೆದರಿಕೆ ಒಡ್ಡಿದ ಇಬ್ಬರು ಆರೋಪಿಗಳು : ಪೊಲೀಸ್ ದೂರು ದಾಖಲು - Karavali Times

728x90

31 October 2025

ಪಾಣೆಮಂಗಳೂರಿನ ವೈದ್ಯ ಕುಟುಂಬಕ್ಕೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶಗೈದು ಜೀವಬೆದರಿಕೆ ಒಡ್ಡಿದ ಇಬ್ಬರು ಆರೋಪಿಗಳು : ಪೊಲೀಸ್ ದೂರು ದಾಖಲು

ಬಂಟ್ವಾಳ, ಅಕ್ಟೋಬರ್ 31, 2025 (ಕರಾವಳಿ ಟೈಮ್ಸ್) : ಪಾಣೆಮಂಗಳೂರಿನ ವೈದ್ಯ ಕುಟುಂಬಕ್ಕೆ ಸೇರಿದ ಜಮೀನಿಗೆ ಜೆಸಿಬಿಯೊಂದಿಗೆ ಅಕ್ರಮ ಪ್ರವೇಶಗೈದ ಇಬ್ಬರು ಆರೋಪಿಗಳು ಮರಗಳನ್ನು ಕಿತ್ತು ಹಾಕಿದ್ದಲ್ಲದೆ ಪ್ರಶ್ನಿಸಿದ ವೈದ್ಯ ಕುಟುಂಬಕ್ಕೆ ಬೈದು ಜೀವಬೆದರಿಕೆ ಹಾಕಿದ ಘಟನೆ ಅಮ್ಮುಂಜೆ ಗ್ರಾಮದಲ್ಲಿ ಅ 30 ರಂದು ಸಂಭವಿಸಿದೆ. 

ಈ ಬಗ್ಗೆ ನರಿಕೊಂಬು ಗ್ರಾಮದ ಪಾಣೆಮಂಗಳೂರು ನಂದಾದೀಪ ನಿವಾಸಿ, ಪಾಣೆಮಂಗಳೂರಿನ ವೈದ್ಯ ಡಾ ಆತ್ಮರಂಜನ್ ರೈ ಅವರ ಪತ್ನಿ ಪ್ರತಿಭಾ ರೈ (65) ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಇವರ ಮಾಲಿಕತ್ವದ ಅಮ್ಮುಂಜೆ ಗ್ರಾಮದ ಸರ್ವೆ ನಂಬ್ರ 143/14 ರಲ್ಲಿ 1.08 ಎಕ್ರೆ ಹಾಗೂ ಸರ್ವೆ ನಂಬ್ರ 143/12 ರಲ್ಲಿ 0.25 ಎಕ್ರೆ ಜಮೀನಿಗೆ ಇವರು ಹಾಗೂ ಅವರ ಪತಿ ಡಾ ಆತ್ಮರಂಜನ್ ರೈ, ಅಳಿಯ ಸೋಹನ್ ರೈ, ಸಂಬಂಧಿ ಚೇತನ ಹೆಗ್ಡೆ ಅವರೊಂದಿಗೆ ಅ 30 ರಂದು ಅಪರಾಹ್ನ 3.30ಕ್ಕೆ ಹೋದಾಗ ನೋಬರ್ಟ್ ಡಿಸೋಜ ಹಾಗೂ ಶಾಂತಿ ಡಿಸೋಜ ಎಂಬವರು ವೈದ್ಯ ಕುಟುಂಬದ ಆಸ್ತಿಗೆ ಅತಿಕ್ರಮಣ ಮಾಡಿ, ಎರಡು ಜೆಸಿಬಿಗಳೊಂದಿಗೆ ಅಡ್ಡಿಪಡಿಸುತ್ತಿರುವುದನ್ನು ನೋಡಿ ವೈದ್ಯ ಕುಟುಂಬಕ್ಕೆ ಅಘಾತವಾಗಿದೆ. ಇದೇ ವೇಳೆ ಜಮೀನಿನಲ್ಲಿರುವ ಮರಗಳನ್ನು ಕಿತ್ತು ಹಾಕಿರುತ್ತಾರೆ. ಈ ಬಗ್ಗೆ ವೈದ್ಯ ಕುಟುಂಬ ಪ್ರಶ್ನಿಸಿದಾಗ ಆರೋಪಿಗಳು ಅವಾಚ್ಯವಾಗಿ ಬೈದು, ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ  ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 163/2025 ಕಲಂ 329(3), 352, 351(2) ಜೊತೆಗೆ 3(5) ಬಿ ಎನ್ ಎಸ್-2023 ಪ್ರಕಾರ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರಿನ ವೈದ್ಯ ಕುಟುಂಬಕ್ಕೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶಗೈದು ಜೀವಬೆದರಿಕೆ ಒಡ್ಡಿದ ಇಬ್ಬರು ಆರೋಪಿಗಳು : ಪೊಲೀಸ್ ದೂರು ದಾಖಲು Rating: 5 Reviewed By: karavali Times
Scroll to Top