ಬಂಟ್ವಾಳ, ಅಕ್ಟೋಬರ್ 31, 2025 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು, ಮಚ್ಚಿನ ಗ್ರಾಮದ ಕುಂಡಡ್ಕ ಎಂಬಲ್ಲಿ ಅಕ್ರಮ ಮರಳು ದಾಸ್ತಾನು ಮಾಡುತ್ತಿದ್ದ ಪ್ರಕರಣ ಬೇಧಿಸಿದ ಪೊಲೀಸರು 2 ಟನ್ ಮರಳು ವಶಪಡಿಸಿಕೊಂಡ ಘಟನೆ ಅ 30 ರಂದು ನಡೆದಿದೆ.
ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಸೈ ರಾಜೇಶ್ ಕೆ ವಿ ಅವರ ನೇತೃತ್ವದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದು, ಮಚ್ಚಿನ ಗ್ರಾಮದ ಕುಂಡಡ್ಕ ತಾರೆಮಾರು ಎಂಬಲ್ಲಿ ಸೇತುವೆ ಬಳಿ ನದಿಯ ಬದಿಯಲ್ಲಿ ಸುಲೈಮಾನ್ ಎಂಬವರು ತೋಡಿನಿಂದ ಅಕ್ರಮವಾಗಿ ಮರಳನ್ನು ತೆಗೆದು ಸರಕಾರಿ ಜಾಗದಲ್ಲಿ ರಾಶಿ ಹಾಕಿಕೊಂಡಿರುವುದಾಗಿ ಬಂದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸರಕಾರಿ ಜಮೀನಿನಲ್ಲಿ ಎರಡು ಕಡೆ ತೋಡಿನ ಹತ್ತಿರ ಸುಮಾರು 2 ಟನ್ ಮರಳನ್ನು ತೋಡಿನಿಂದ ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ. ತೋಡಿನಿಂದ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶಕ್ಕಾಗಿ ದಾಸ್ತಾನು ಇರಿಸಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಮರಳಿನ ಮೌಲ್ಯ 12 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment