ಬಂಟ್ವಾಳ, ಅಕ್ಟೋಬರ್ 01, 2025 (ಕರಾವಳಿ ಟೈಮ್ಸ್) : ದೇರಳಕಟ್ಟೆಯ ಬ್ಯಾರಿ ಬರಹಗಾರರು ಹಾಗೂ ಕಲಾವಿದರ ಒಕ್ಕೂಟ (ಎಲ್ತ್‍ಕಾರ್-ಕಲಾವಿದಮಾರೊ ಕೂಟ)- “ಮೇಲ್ತೆನೆ” ಇದರ ದಶಮಾನೋತ್ಸವ ಕಾರ್ಯಕ್ರಮ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್ಸಿನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಮಾತನಾಡಿ, ಭಾಷೆಯನ್ನು ಬಳಕೆ ಮಾಡಿದಷ್ಟು ಅಭಿವೃದ್ಧಿಯಾಗಲಿದೆ. ಬ್ಯಾರಿ ಭಾಷೆಯ ಅಭಿವೃದ್ಧಿಗೆ ಹೊಸ ಪದಗಳ ಶೋಧನೆಯಾಗಬೇಕಿದೆ. ಭಾಷೆಗಳ ವಿಷಯದಲ್ಲಿ ಶ್ರೇಷ್ಠತೆಯ ವ್ಯಸನ ಇರಬಾರದು. ನಿರ್ಲಕ್ಷ್ಯ, ಮಡಿವಂತಿಕೆ ಮಾಡಬಾರದು. ಎಲ್ಲರಿಗೂ ಅವರವರ ಮಾತೃ ಭಾಷೆಯ ಮೇಲೆ ಅಭಿಮಾನ ಇದ್ದೇ ಇರುತ್ತದೆ. ಹಾಗಾಗಿ ಯಾವುದೇ ಭಾಷೆಯನ್ನು ಕೀಳಾಗಿ ಕಾಣಬಾರದು. ಬ್ಯಾರಿ ಭಾಷೆಯ ಅಭಿವೃದ್ಧಿಗೆ ಮೇಲ್ತೆನೆ ಸಂಘಟನೆಯು ಕಳೆದ ಹತ್ತು ವರ್ಷದಲ್ಲಿ ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು.
ಮೇಲ್ತೆನೆಯ ಅಧ್ಯಕ್ಷ ವಿ ಇಬ್ರಾಹಿಂ ನಡುಪದವು ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಹಿರಿಯ ಗಾಯಕ ರಹೀಂ ಬಿ ಸಿ ರೋಡು ಅವರಿಗೆ ಮೇಲ್ತೆನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಣಚೂರು ಮೆಡಿಕಲ್ ಕಾಲೇಜ್ ಆಂಡ್ ರಿಸರ್ಚ್ ಸೆಂಟರ್ ಚೆಯರ್ ಮೆನ್ ಡಾ ಹಾಜಿ ಯು ಕೆ ಮೋನು ಕಣಚೂರು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮೇಲ್ತೆನೆಯ ನೂತನ ಲೋಗೋ ಅನಾವರಣಗೊಳಿಸಲಾಯಿತು. ಮೇಲ್ತೆನೆ ಪ್ರಕಟಿಸಿದ ‘ಮೇಲ್ತೆನೆಲ್ ಬಿರಿಂಞõÉ ಪೂವುಙ’ ಕವನ ಸಂಕಲನವನ್ನು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು ಎಚ್ ಬಿಡುಗಡೆಗೊಳಿಸಿದರು.
ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞÂ ಪಾರೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಬ್ದುಲ್ ರಹ್ಮಾನ್ ಕಣಚೂರು, ಡಾ ಅಬೂಬಕರ್ ಸಿದ್ದೀಕ್, ಶಾಹಿದಾ ಬಾನು, ಮುಹಮ್ಮದ್ ಅಲಿ ಕಮ್ಮರಡಿ, ಬಶೀರ್ ಬೈಕಂಪಾಡಿ, ಅಬೂಬಕರ್ ಹಾಜಿ ನಾಟೆಕಲ್, ನಝೀರ್ ಉಳ್ಳಾಲ್, ಇಬ್ರಾಹೀಂ ಹಾಜಿ ಕತರ್, ಸಿದ್ದೀಕ್ ಗ್ಲಾಡ್ ದೇರಳಕಟ್ಟೆ, ಹಾಜಿ ಎನ್ ಎಸ್ ಕರೀಂ, ಆಸೀಫ್ ಮಾಳಿಗೆ, ಎಚ್ ಕೆ ಖಾದರ್ ಹಾಜಿ ಉಳ್ಳಾಲ, ಹಮೀದ್ ಹಸನ್ ಮಾಡೂರು, ಮುಹಮ್ಮದ್ ಹನೀಫ್ ಶೈನ್, ಅಸ್ಗರ್ ಮುಡಿಪು, ಹಾಜಿ ಟಿ ಎಸ್ ಅಬ್ದುಲ್ಲಾ ಸಾಮಣಿಗೆ, ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್, ಹೈದರ್ ಪರ್ತಿಪ್ಪಾಡಿ, ಎಸ್ ಕೆ ಅಬ್ದುಲ್ ಖಾದರ್ ಹಾಜಿ ಮುಡಿಪು, ನಝರ್ ಷಾ ಪಟ್ಟೋರಿ, ಹಾಜಿ ಅಬ್ದುಲ್ ಖಾದರ್ ಟಿ ಆರ್, ಜಲೀಲ್ ಮೋಂಟುಗೋಳಿ, ಯು ಎಚ್ ಖಾಲಿದ್ ಉಜಿರೆ, ಅಬ್ದುಲ್ ರಝಾಕ್ ಇಂಜಿನಿಯರ್ ದುಬೈ, ಹೈದರ್ ಕೈರಂಗಳ, ಮುಹಮ್ಮದ್ ಮೋನು, ಲತೀಫ್ ಕಂದಕ್, ಮೇಲ್ತೆನೆ ಇಬ್ರಾಹಿಂ ನಡುಪದವು, ಪದಾಧಿಕಾರಿಗಳಾದ ಇಬ್ರಾಹೀಂ ರಫೀಕ್ ಮುದುಂಗಾರುಕಟ್ಟೆ, ಅಶ್ರಫ್ ಡಿ ಎ ದೇರಳಕಟ್ಟೆ, ಸಿದ್ದೀಕ್ ಎಸ್ ರಾಝ್, ಮುಹಮ್ಮದ್ ಬಾಷಾ ನಾಟೆಕಲ್, ಆಸೀಫ್ ಬಬ್ಬುಕಟ್ಟೆ, ಬಿ ಎಂ ಕಿನ್ಯ, ರಫೀಕ್ ಕಲ್ಕಟ್ಟ, ಹೈದರ್ ಹರೇಕಳ-ಆಲಡ್ಕ, ಅಬೂಬಕರ್ ಎಚ್ ಕಲ್ ಮೊದಲಾದವರು ಭಾಗವಹಿಸಿದ್ದರು.
ಸದಸ್ಯರಾದ ಯೂಸುಫ್ ವಕ್ತಾರ್ ಸ್ವಾಗತಿಸಿ, ಅಶೀರುದ್ದೀನ್ ಸಾರ್ತಬೈಲ್ ಹಾಗೂ ಸಿ ಎಂ ಶರೀಫ್ ಪಟ್ಟೋರಿ ಸನ್ಮಾನ ಪತ್ರ ವಾಚಿಸಿದರು. ಬಶೀರ್ ಕಲ್ಕಟ್ಟ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಹಾಗೂ ಮನ್ಸೂರ್ ಅಹ್ಮದ್ ಸಾಮಣಿಗೆ, ರಿಯಾಝ್ ಮಂಗಳೂರು ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ “ಮಕ್ಕಳ ವಿದ್ಯಾಭ್ಯಾಸದಲ್ಲಿ ತಂದೆ-ತಾಯಿಯ ಪಾತ್ರ” ಎಂಬ ವಿಷಯದಲ್ಲಿ ಕನೀಝಾ ಫಾತಿಮಾ, ಶಮೀಮಾ ಕುತ್ತಾರ್, ರೈಹಾನ ವಿ ಕೆ ಸಚೇರಿಪೇಟೆ, ರಹ್ಮತ್ ಮನ್ಸೂರ್, ಉಮೇರಾ ಬಾನು, ಶಂಶುದ್ದೀನ್ ಮಡಿಕೇರಿ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಅಬ್ದುಲ್ ರಝಾಕ್ ಅನಂತಾಡಿ, ಎ ಕೆ ಕುಕ್ಕಿಲ, ಹುಸೈನ್ ಕಾಟಿಪಳ್ಳ ಅವರು ಚರ್ಚಾಗೋಷ್ಠಿ ನಡೆಸಿಕೊಟ್ಟರು. ಟಿ ಇಸ್ಮಾಯಿಲ್ ಮಾಸ್ಟರ್ ಗೋಷ್ಠಿ ನಿರ್ವಹಿಸಿದರು.
ಕವಿಗಳಾದ ಅಶ್ರಫ್ ಅಪೆÇೀಲೊ, ಯಂಶ ಬೇಂಗಿಲ, ಸಫ್ವಾನ್ ಸವಣೂರು, ಲುಕ್ಮಾನ್ ಅಡ್ಯಾರ್, ಸೈಫ್ ಕುತ್ತಾರ್ ಮತ್ತು ಮಿಸ್ರಿಯಾ ಪಜೀರ್, ಅಸ್ಮತ್ ವಗ್ಗ, ಫರ್ಹಾನಾ ಉಳ್ಳಾಲ, ಹವ್ವಾ ಬುಶ್ರ ಕಬಕ, ರಮೀಝಾ ಎಂ ಬಿ ಕುಕ್ಕಾಜೆ ಅವರಿಂದ ಕವಿಗೋಷ್ಠಿ ನಡೆಯಿತು. ಬಶೀರ್ ಅಹ್ಮದ್ ಕಿನ್ಯ ಕವಿಗೋಷ್ಠಿ ನಿರ್ವಹಿಸಿದರು.
ಮೆಹಂದಿ, ಆಶು ಕವನ ಮತ್ತು ಮಕ್ಕಳಿಗೆ ಏರ್ಪಡಿಸಿದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 2024-25ನೇ ಸಾಲಿನ ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉಳ್ಳಾಲ ತಾಲೂಕು ಮಟ್ಟದಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ವಿಶೇಷ ಚೇತನ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.






















0 comments:
Post a Comment