ಬಂಟ್ವಾಳ, ಸೆಪ್ಟೆಂಬರ್ 30, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಕಸ ಸಂಗ್ರಹ ಗಾಡಿ ಬಿ ಸಿ ರೋಡು ಮುಖ್ಯ ಪೇಟೆಯ ಎರಡು ಕಡೆಗಳಲ್ಲಿ ಕಳೆದ ಕೆಲ ದಿನಗಳಿಂದ ಕೊಳೆಯುತ್ತಿದೆ. ಬಿ ಸಿ ರೋಡಿನ ಪೊಲೀಸ್ ಠಾಣೆ ರಸ್ತೆಯ ಬದಿ ಹಾಗೂ ಪೊಲೀಸ್ ಠಾಣೆ ರಸ್ತೆಗೆ ತಿರುವು ಪಡೆಯುವ ಮುಖ್ಯ ರಸ್ತೆ ಬಳಿ ಅಂಗಡಿಯೊಂದರ ಸಮೀಪದಲ್ಲಿ ಎರಡು ಕಸ ಸಂಗ್ರಹ ಗಾಡಿಗಳು ನಿರಂತರವಾಗಿ ಬಾಕಿಯಾಗುತ್ತಿರುವುದು ಕಂಡು ಬರುತ್ತಿದ್ದು ಸಾರ್ವಜನಿಕರು ಈ ಬಗ್ಗೆ ಕಿರಿ ಕಿರಿ ಅನುಭವಿಸುತ್ತಿರುವುದಾಗಿ ದೂರಿಕೊಂಡಿದ್ದಾರೆ.
ಪುರಸಭಾ ಕಸ ಸಂಗ್ರಹ ನೌಕರರು ನಿತ್ಯ ಕಸ ಗುಡಿಸಿ ಗಾಡಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದು, ಬಳಿಕ ಗಾಡಿಯೊಂದಿಗೆ ತೆರಳುವುದು ಸಾಮಾನ್ಯವಾಗಿ ವಾಡಿಕೆಯಾಗಿದೆ. ಆದರೆ ಪುರಸಭಾ ವ್ಯಾಪ್ತಿಯ ಪ್ರಮುಖ ಪಟ್ಟಣವಾಗಿರುವ ಬಿ ಸಿ ರೋಡಿನಲ್ಲಿ ನಿತ್ಯ ಕಸ ಸಂಗ್ರಹ ನಡೆಸುವ ನೌಕರರು ಕಸ ಸಂಗ್ರಹದ ಬಳಿಕ ಕಸ ಸಂಗ್ರಹ ವಾಹನಕ್ಕೆ ಕಸ-ತ್ಯಾಜ್ಯ ವರ್ಗಾಯಿಸಿ ನಂತರ ಕೈ ಗಾಡಿಯನ್ನು ಪೇಟೆಯ ಪ್ರಮುಖ ಬೀದಿಯಲ್ಲೇ ಬಿಟ್ಟು ತೆರಳುತ್ತಿರುವುದು ಸಾರ್ವಜನಿಕರಿಗೆ ಒಂದು ರೀತಿಯಲ್ಲಿ ಮುಜುಗರದ ಜೊತೆಗೆ ಕಿರಿಕಿರಿಯೂ ಉಂಟು ಮಾಡುತ್ತಿದೆ.
ಪೇಟೆಯಲ್ಲಿ ಕಸ ಸಂಗ್ರಹದ ನೌಕರರ ಈ ನಿರ್ಲಕ್ಷ್ಯ ಭಾವನೆಗೆ ಪುರಸಭಾಧಿಕಾರಿಗಳು ಹಾಗೂ ಅಧ್ಯಕ್ಷರು, ಸ್ಥಳೀಯರ ಸದಸ್ಯರು ಸೂಕ್ತ ಎಚ್ಚರಿಕೆ ನೀಡಿ ತಕ್ಷಣ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
























0 comments:
Post a Comment