ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ದ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ : ತ್ವರಿತ ಕಾರ್ಯಾಚರಣೆ ಮೂಲಕ ಹಣ ಹಿಂತಿರುಗಿಸಿದ ಮಂಗಳೂರು ಸೆನ್ ಪೊಲೀಸರು - Karavali Times ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ದ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ : ತ್ವರಿತ ಕಾರ್ಯಾಚರಣೆ ಮೂಲಕ ಹಣ ಹಿಂತಿರುಗಿಸಿದ ಮಂಗಳೂರು ಸೆನ್ ಪೊಲೀಸರು - Karavali Times

728x90

31 October 2025

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ದ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ : ತ್ವರಿತ ಕಾರ್ಯಾಚರಣೆ ಮೂಲಕ ಹಣ ಹಿಂತಿರುಗಿಸಿದ ಮಂಗಳೂರು ಸೆನ್ ಪೊಲೀಸರು

ಮಂಗಳೂರು, ಅಕ್ಟೋಬರ್ 31, 2025 (ಕರಾವಳಿ ಟೈಮ್ಸ್) : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ  ಬೆದರಿಸಿ ಆನ್ ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ ಪ್ರಕರಣ ಲಾಕ್ ಮಾಡಿ ತ್ವರಿತ ಕಾರ್ಯಾಚರಣೆ ನಡೆಸಿದ ಮಂಗಳೂರು ಸೆನ್ ಪೊಲೀಸರು ಹಣವನ್ನು ಹಿಂದುರುಗಿಸುವಲ್ಲಿ ಸಫಲರಾಗಿದ್ದಾರೆ. 

ಬಿಜೈ ನಿವಾಸಿ ಸುಮಾರು 79 ವರ್ಷ ಪ್ರಾಯದ ಹಿರಿಯ ಮಹಿಳೆಗೆ ಅಕ್ಟೋಬರ್ 23 ರಂದು ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ಯಾರೋ ಅಪರಿಚಿತ ವ್ಯಕ್ತಿ ಫೆÇೀನ್ ಕರೆ ಮಾಡಿ ಮಹಿಳೆ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಗಿರುವುದಾಗಿ ಹಾಗೂ ಈ ಬಗ್ಗೆ ತಮ್ಮನ್ನು ಬಂಧಿಸುವುದಾಗಿ ಹೆದರಿಸಿರುತ್ತಾರೆ. ನಂತರ ಬಂಧನದಿಂದ ಪಾರಾಗಲು ಹಣವನ್ನು ಆರ್ ಬಿ ಐನಲ್ಲಿ ಡೆಪಾಸಿಟ್ ಇಡುವಂತೆ ಹಾಗೂ ಸದ್ರಿ ಡೆಪಾಸಿಟ್ ಎಲ್ಲಾ ಹಣವನ್ನು ಪರಿಶೀಲನೆ ಮುಗಿದ ನಂತರ ವಾಪಾಸು ನೀಡುವುದಾಗಿ ತಿಳಿಸಿದ್ದಾನೆ. ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು, ಒಂದು ವೇಳೆ ತಿಳಿಸಿದರೆ ಬಂಧಿಸುವುದಾಗಿಯೂ ಭಯ ಹುಟ್ಟಿಸಿರುತ್ತಾನೆ. ಇದರಿಂದ ಸಂಪೂರ್ಣವಾಗಿ ಭಯಭೀತರಾದ ಹಿರಿಯ ಮಹಿಳೆ ಈ ವಿಚಾರವನ್ನು ಯಾರಿಗೂ ತಿಳಿಸಿರುವುದಿಲ್ಲ. ಸುಮಾರು 5 ರಿಂದ 6 ಗಂಟೆಯ ಕಾಲ ದೂರವಾಣಿ ಕರೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಗಳು ಮಹಿಳೆಗೆ ವಾಟ್ಸಪ್ ಮೂಲಕ ವಿಡಿಯೋ ಕರೆ ಮಾಡಿ ಸಮವಸ್ತ್ರದಲ್ಲಿರುವ ಪೆÇಲೀಸ್ ಅಧಿಕಾರಿಗಳಂತೆ ಕಾಣಿಸಿಕೊಂಡು ಹಾಗೂ ಜಡ್ಜ್ ಕುಳಿತಿರುವ ಹಾಗೆ ವಿಡಿಯೋದಲ್ಲಿ ತೋರಿಸಿ ಮಹಿಳೆಯನ್ನು ನಂಬಿಸಿದ್ದಾರೆ. ಮಹಿಳೆ ತನ್ನಲ್ಲಿರುವ ಫಿಕ್ಸೆಡ್ ಡೆಪಾಸಿಟ್ ಹಣ 17 ಲಕ್ಷ ರೂಪಾಯಿಗಳನ್ನು ಅಪರಿಚಿತ ವ್ಯಕ್ತಿ ನೀಡಿದ ಬ್ಯಾಂಕ್ ಖಾತೆಗೆ ಆರ್ ಟಿ ಜಿ ಎಸ್ ಮೂಲಕ ತಮ್ಮ ಬ್ಯಾಂಕ್ ಖಾತೆಯಿಂದ ಖುದ್ದಾಗಿ ಬ್ಯಾಂಕಿಗೆ ತೆರಳಿ ಅದೇ ದಿನ ಅಂದರೆ ಅ 23 ರಂದು ಮಧ್ಯಾಹ್ನ 3 ಗಂಟೆಗೆ ವರ್ಗಾಯಿಸಿರುತ್ತಾರೆ.

ನಂತರ ಅದೇ ದಿನ ಸಂಜೆ  ಸುಮಾರು 6 ಗಂಟೆ ವೇಳೆಗೆ ದೂರುದಾರ ಮಹಿಳೆ ವಿಚಾರವನ್ನು ತಮ್ಮ ಪಕ್ಕದ ಮನೆಯ ಹೆಂಗಸರಿಗೆ ತಿಳಿಸಿದಾಗ ಸದ್ರಿ ಮಹಿಳೆಯರು ಎಚ್ಚೆತ್ತುಕೊಂಡು ಅವರನ್ನು ಜೊತೆಯಲ್ಲಿ ಕರೆದುಕೊಂಡು ಸೈಬರ್ ಅಪರಾಧ ಪೆÇಲೀಸ್ ಠಾಣೆಗೆ ಸುಮಾರು ಸಂಜೆ 7 ಗಂಟೆಗೆ ಹಾಜರಾಗಿರುತ್ತಾರೆ. ನಂತರ ಕೂಡಲೇ ಸೈಬರ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಕ್ಷಣ ಸಿ.ಇ.ಎನ್ ಅಪರಾಧ ಪೆÇಲೀಸ್ ಠಾಣಾಧಿಕಾರಿಗಳು 1930 ಸಹಾಯವಾಣಿ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ 17 ಲಕ್ಷ ರೂಪಾಯಿ ಹಣವನ್ನು ಹೋಲ್ಡ್ ಮಾಡಿಸಿ, ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್ ಅವರಿಗೆ ಕರೆ ಮಾಡಿ ಹಣ ಇರುವ ಬಗ್ಗೆ ಖಚಿತಪಡಿಸಿಕೊಳ್ಳಲಾಗಿರುತ್ತದೆ.

ಅ 24 ರಂದು ಹಣ ಬಿಡುಗಡೆಗಾಗಿ ಮಾಹಿತಿಯನ್ನು ವರದಿಯೊಂದಿಗೆ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಲಾಗಿದೆ. 

ಅ 25 ಮತ್ತು 26 ರಂದು ಸಾರ್ವತ್ರಿಕ ರಜೆ ಇದ್ದುದರಿಂದ, ಅ 27 ರಂದು ನ್ಯಾಯಾಲಯವು ಹಣ ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದು, ಸದ್ರಿ ಆದೇಶವನ್ನು ಸ್ವೀಕರಿಸಿಕೊಂಡು ಮಹಿಳೆಯ ಬ್ಯಾಂಕ್ ಖಾತೆಗೆ  17 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿಸಲಾಗಿದೆ.

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಿರಿಯ ನಾಗರಿಕರಿಗೆ  ಅಪರಿಚಿತ  ವ್ಯಕ್ತಿಗಳು ಕರೆ ಮಾಡಿ ಅನ್ ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಬಗ್ಗೆ  ತಕ್ಷಣ ಸೈಬರ್ ಅಪರಾಧ  ಪೆÇಲೀಸ್ ಠಾಣೆಯನ್ನು ಸಂಪರ್ಕಿಸಿದ್ದರಿಂದ 1930 ಸಹಾಯವಾಣಿ  ಮೂಲಕ ಹಣವನ್ನು ತಕ್ಷಣ ಹೋಲ್ಡ್ ಮಾಡಿಸಿ ದೂರುದಾರರಿಗೆ ಹಿಂದಿರುಗಿಸಲು ಸಾಧ್ಯವಾಗಿರುತ್ತದೆ.

ಸೈಬರ್ ವಂಚನೆಗೆ ಒಳಗಾದವರು ಎಷ್ಟು ಬೇಗ ಪೆÇಲೀಸ್ ಠಾಣೆಗೆ ಅಥವಾ 1930 ಸಹಾಯವಾಣಿಗೆ  ಕರೆ ಮಾಡಿ ದೂರು ದಾಖಲಿಸುತ್ತಾರೋ, ಅವರ ಹಣ ವಾಪಸ್ ಬರಲು ಅಷ್ಟೇ ಸಾಧ್ಯತೆ ಇರುತ್ತದೆ, ವಿಳಂಬವಾದಲ್ಲಿ ಆರೋಪಿತರು ಹಣವನ್ನು ಬೇರೆ ಕಡೆಗೆ ವರ್ಗಾವಣೆ ಮಾಡುತ್ತಾರೆ. 

ಭಾರತ ದೇಶದ ಕಾನೂನು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಡಿಜಿಟಲ್ ಅರೆಸ್ಟ್ ಎಂಬ ಪ್ರಕ್ರಿಯೆ ಇರುವುದಿಲ್ಲ, ಪೆÇಲೀಸರು, ನ್ಯಾಯಾಧೀಶರು, ಸಿ.ಬಿ.ಐ, ಇ.ಡಿ ಹಾಗೂ ಇನ್ನಿತರ ಕಾನೂನು ಜಾರಿ ಸಂಸ್ಥೆಗಳ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಯಾವುದೇ ಕಾನೂನು ಪ್ರಕ್ರಿಯಯನ್ನು  ನಡೆಸುವುದಿಲ್ಲ.

ಅದೇ ರೀತಿ ಡಿಜಿಟಲ್ ಇನ್ವೆಸ್ಟ್ ಮೆಂಟ್ ಸ್ಕ್ಯಾಂ ಈಗಾಗಲೇ ಹೆಚ್ಚುತ್ತಿದ್ದು, ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಆರ್ ಬಿ ಐ/ ಸೆಬಿಯ ಮಾನ್ಯತೆ ಪಡೆದಿದೆಯೋ ಇಲ್ಲವೋ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳದೇ ಯಾವುದೋ ಅಪರಿಚಿತರಿಂದ ಪರಿಚಿತವಾದ ಡಿಮ್ಯಾಟ್ ಅಕೌಂಟ್ ಇಲ್ಲದ ನಕಲಿ ಶೇರ್ ಮಾರ್ಕೆಟ್/ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡುವುದರಿಂದ ಮೋಸ ಹೋಗುತ್ತಿರುವುದಾಗಿದೆ ಎಂದು ಪೊಲೀಸರು ಸೂಚನೆ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ದ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ : ತ್ವರಿತ ಕಾರ್ಯಾಚರಣೆ ಮೂಲಕ ಹಣ ಹಿಂತಿರುಗಿಸಿದ ಮಂಗಳೂರು ಸೆನ್ ಪೊಲೀಸರು Rating: 5 Reviewed By: karavali Times
Scroll to Top