ಮಂಗಳೂರು, ಅಕ್ಟೋಬರ್ 08, 2025 (ಕರಾವಳಿ ಟೈಮ್ಸ್) : ನಗರದ ಲಾಲ್ ಭಾಗ್ ಎಂಬಲ್ಲಿನ ಕಾಂಪ್ಲೆಕ್ಸ್‍ವೊಂದರ ಅಂಗಡಿಯಲ್ಲಿ ಅಕ್ರಮವಾಗಿ ಇ-ಸಿಗರೇಟ್ ಮಾರಾಟ ಹಾಗೂ ಸರಬರಾಜು ಮಾಡುತ್ತಿದ್ದ ಪ್ರಕರಣ ಬೇದಿಸಿದ ಬರ್ಕೆ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಲ್ಲದೆ ಅಂಗಡಿ ಮಾಲಕ ಸಹಿತ ಮೂರು ಮಂದಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಆರೋಪಿಗಳಾದ ಬಂಟ್ವಾಳ ತಾಲೂಕು, ಗಣೇಶ್ ಕೋಡಿ ಹೌಸ್ ನಿವಾಸಿ ಸಂತೋಷ್ (32), ಕುದ್ರೋಳಿ-ಜಾಮಿಯಾ ಮಸೀದಿ ಬಳಿ ನಿವಾಸಿ ಇಬ್ರಾಹಿಂ ಇರ್ಶಾದ್ (33) ಹಾಗೂ ಶಾಪ್ ಮಾಲಕ ಶಿವು ದೇಶಕೋಡಿ ಎಂಬವರ ವಿರುದ್ದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರದ ಲಾಲ್ ಬಾಗ್ ಎಂಬಲ್ಲಿನ ಸಾಯಿಬೀನ್ ಕಾಂಪ್ಲೆಕ್ಸಿನ “ಆಮಂತ್ರಣ” ಎಂಬ ಹೆಸರಿನ ಅಂಗಡಿಯಲ್ಲಿ ನಿಷೇಧಿತವಾಗಿರುವ ಇ-ಸಿಗರೇಟ್ ಗಳನ್ನು, ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಸ್ವದೇಶಿ ಮತ್ತು ವಿದೇಶಿಯ ಸಿಗರೇಟ್ ಗಳನ್ನು ಹಾಗೂ ಹುಕ್ಕಾ ಸೇವನೆ ಮಾಡಲು ಬಳಸುವ ಸಾಧನಗಳನ್ನು ಅಕ್ರಮವಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ, ಯುವಕ-ಯುವತಿಯರಿಗೆ ಸರಬರಾಜು ಹಾಗೂ ಮಾರಾಟ ಮಾಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ಬರ್ಕೆ ಪೆÇಲೀಸ್ ಠಾಣಾ ಇನ್ಸ್ ಪೆಕ್ಟರ್ ಮೋಹನ್ ಕೊಟ್ಟಾರಿ, ಠಾಣಾ ಪಿಎಸ್ಸೈ ನೇತೃತ್ವದ ಪೊಲೀಸರು ಅ 6 ರಂದು ಸಂಜೆ ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಗಡಿಯಲ್ಲಿ 4,43,125/- ರೂಪಾಯಿ ಮೌಲ್ಯದ ಒಟ್ಟು 847 ವಿವಿಧ ಕಂಪೆನಿಗಳ ಇ-ಸಿಗರೇಟ್ ಗಳನ್ನು, ಸಿಗರೇಟ್ ಪ್ಯಾಕ್ ಮೇಲೆ 85% ಪ್ರತಿಶತ ಅದರ ಸೇವನೆಯಿಂದ ಆಗುವ ದುಷ್ಪರಿಣಾಮದ ಚಿತ್ರವನ್ನು ಪ್ರದರ್ಶಿಸದೇ ಇರುವ ವಿವಿಧ ಕಂಪೆನಿಗಳ ಸ್ವದೇಶಿ ಮತ್ತು ವಿದೇಶಿಯ ಒಟ್ಟು 10 ಪ್ಯಾಕ್ (412 ಬಾಕ್ಸ್) ಮತ್ತು 5,09,12/- ರೂಪಾಯಿ ಮೌಲ್ಯದ 86 ಪ್ಯಾಕ್ ಸಿಗರೇಟ್ ಗಳು ಮತ್ತು ಹುಕ್ಕಾ ಸೇವನೆ ಮಾಡಲು ಬಳಸುವ ವಿವಿಧ ಆಕೃತಿಗಳ ಸುಮಾರು 20,500/- ರೂಪಾಯಿ ಮೌಲ್ಯದ 25 ಸಾಧನಗಳ ಸಹಿತ ಒಟ್ಟು 9,72,745/- ರೂಪಾಯಿ ಮೌಲ್ಯದ ಬೆಲೆ ಬಾಳುವ ಸೊತ್ತುಗಳನ್ನು ಮಾರಾಟ ಹಾಗೂ ಸರಬರಾಜು ಮಾಡಲು ವಶದಲ್ಲಿ ಇಟ್ಟುಕೊಂಡಿರುವುದನ್ನು ಪೊಲೀರು ವಶಕ್ಕೆ ಪಡೆದುಕೊಂಡಿದ್ದಾರೆ.













0 comments:
Post a Comment