ಮಂಗಳೂರು, ಅಕ್ಟೋಬರ್ 08, 2025 (ಕರಾವಳಿ ಟೈಮ್ಸ್) : 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಸಬಾ ಬೆಂಗ್ರೆ, ಇಮ್ರಾನ್ ಮಂಝಿಲ್ ನಿವಾಸಿ ಇಸ್ಮಾಯಿಲ್ ಅಲಿಯಾಸ್ ಮೊಹಮ್ಮದ್ ಎಂಬವರ ಪುತ್ರ ಅಲ್ತಾಫ್ (47) ಎಂದು ಹೆಸರಿಸಲಾಗಿದೆ. ಮಂಗಳೂರು ನಗರ ಪೆÇಲೀಸ್ ಕಮೀಷನರೇಟ್ ವ್ಯಾಪ್ತಿಯ ಮಂಗಳೂರು ಉತ್ತರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 412/2004 ಕಲಂ 143, 147, 148, 323, 427, 506, 149 ಐಪಿಸಿ ಪ್ರಕರಣದ ಹಾಗೂ ಮಂಗಳೂರು 2ನೇ ಸಿ.ಜೆ.ಎಂ ನ್ಯಾಯಾಲಯದ ಸಿಸಿ ನಂಬ್ರ 12-2007 ರಲ್ಲಿ ಆರೋಪಿಯಾಗಿರುವ ಈತ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೆ ಸುಮಾರು 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಆರೋಪಿ ಪತ್ತೆ ಬಗ್ಗೆ ಉತ್ತರ ಪೆÇಲೀಸ್ ಠಾಣಾ ಎಎಸ್ಸೈ ಬಾಬು ಹಾಗೂ ಪಿಸಿಗಳಾದ ಗುರು ಬಿ ಟಿ, ಸುನಿಲ್ ಕುಮಾರ್ ಎನ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಅಕ್ಟೋಬರ್ 5 ರಂದು ಖಚಿತ ಮಾಹಿತಿ ಮೇರೆಗೆ ಮಂಗಳೂರು ನಗರದ ಬಂದರು ಪರಿಸರದಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.










0 comments:
Post a Comment