ಬಂಟ್ವಾಳ, ಅಕ್ಟೋಬರ್ 09, 2025 (ಕರಾವಳಿ ಟೈಮ್ಸ್) : ಬೈಕಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಅ 8 ರಂದು ಬೆಳಿಗ್ಗೆ ಬಿ ಸಿ ರೋಡಿನಲ್ಲಿ ನಡೆದಿದೆ.
ಆರೋಪಿಗಳನ್ನು ಅಬ್ದುಲ್ ಸಾದಿಕ್ ಹಾಗೂ ಅಬ್ದುಲ್ ಮಜೀದ್ ಎಂದು ಹೆಸರಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ಅವರ ನೇತೃತ್ವದ ಪೊಲೀಸರು ಅ 8 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ವೇಳೆ ಬೆಳಿಗ್ಗೆ ಸುಮಾರು 11.50 ಗಂಟೆಗೆ ಗೂಡಿನಬಳಿಯಲ್ಲಿರುವ ಸಂದರ್ಭ ಪಾಣೆಮಂಗಳೂರು ಕಡೆಯಿಂದ ಬಿ ಸಿ ರೋಡು ಕಡೆಗೆ ಬೈಕಿನಲ್ಲಿ ಇಬ್ಬರು ಹೆಲ್ಮೆಟ್ ಧರಿಸದೆ ಬರುತ್ತಿರುವುದನ್ನು ಗಮನಿಸಿದ ಪೊಲೀಸರು ಬೈಕ್ ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸದೆ ಗೂಡಿನಬಳಿ ಮಸೀದಿಗೆ ಹೋಗುವ ರಸ್ತೆಗೆ ತಿರುಗಿಸಿದ್ದಾರೆ. ಬೈಕ್ ಸವಾರ ಮತ್ತು ಹಿಂಬದಿ ಸವಾರನ ಮದ್ಯದಲ್ಲಿ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡಿದ್ದರು. ಬೈಕ್ ಸವಾರರ ಬಗ್ಗೆ ಅನುಮಾನಗೊಂಡ ಪೊಲೀಸರು ತಕ್ಷಣ ಜೀಪಿನಲ್ಲಿ ಬಿ ಸಿ ರೋಡಿನಿಂದ ಕೈಕುಂಜೆ ರೈಲ್ವೇ ಸ್ಟೇಷನ್ ಬಳಿ ಗೂಡಿನ ಬಳಿಗೆ ಹೋಗುವ ಮಣ್ಣಿನ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಮಧ್ಯಾಹ್ನ 12 ಗಂಟೆಗೆ ಗೂಡಿನ ಬಳಿಯಿಂದ ಅನುಮಾನಾಸ್ಪದವಾಗಿ ಬಂದ ಕೆಎ19 ಎಚ್ ಕೆ 9534 ನೋಂದಣಿ ಸಂಖ್ಯೆಯ ಬೈಕನ್ನು ನಿಲ್ಲಿಸಿ ಸವಾರರನ್ನು ಸುತ್ತುವರಿದು ವಿಚಾರಿಸಿದಾಗ ಸಹ ಸವಾರ ಅಬ್ದುಲ್ ಸಾಧಿಕ್ ಹಾಗೂ ಸವಾರ ಅಬ್ದುಲ್ ಮಜೀದ್ ಎಂದು ತಿಳಿದು ಬಂದಿದೆ.
ಬೈಕ್ ಸವಾರರ ಬಳಿಯಿದ್ದ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದ ಬಗ್ಗೆ ವಿಚಾರಿಸಿದಾಗ ಅಬ್ದುಲ್ ಸಾಧಿಕ್ ಸೆ 25 ರಂದು ಕೆಎ-70-6904 ನೋಂದಣಿ ಸಂಖ್ಯೆಯ ಬೊಲೋರೋ ಪಿಕಪ್ ವಾಹನದಲ್ಲಿ ಮಾದÀಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಇಲಾಖೆಯವರು ಪಿಕ್ ಅಪ್ ಬೆನ್ನಟ್ಟಿಕೊಂಡು ಬಂದಿದ್ದು ಅವರಿಗೆ ಸಿಗದ ಹಾಗೆ ಪಿಕ್ ಅಪ್ ವಾಹನವನ್ನು ಚಲಾಯಿಸಿಕೊಂಡು ಹೋಗಿ ನಂದಾವರ ಎಂಬಲ್ಲಿ ರೈಲ್ವೇ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ನಿಲ್ಲಿಸಿ ಅಲ್ಲಿಂದ ಗಾಂಜಾದ ಸಮೇತ ಪರಾರಿಯಾಗಿ ಗಾಂಜಾವನ್ನು ಸ್ನೇಹಿತ ಮಜೀದನ ಮನೆಯಲ್ಲಿ ಇಟ್ಟಿದ್ದು ಸದ್ರಿ ಗಾಂಜಾವನ್ನು ಮಾರಾಟ ಮಾಡಲು ಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ.
ಈ ಮೊದಲು ಫರಂಗಿಪೇಟೆಯ ಚೋಟಾ ಅಶ್ರಪ್ ಮತ್ತು ಫರಂಗಿಪೇಟೆಯ ಅಜರುದ್ದೀನ್ ಎಂಬವರಿಗೆ ಮಾರಾಟ ಮಾಡಿದ್ದು ಹೆಚ್ಚಿನದನ್ನು ಅವರಿಗೆ ಮಾರಾಟ ಮಾಡಲು ಅವರು ಸಿಗದಿದ್ದರೆ ಮಂಗಳೂರು ಕಡೆಗೆ ಬೇರೆ ಗಿರಾಕಿಗಳಿಗೆ ಮಾರಾಟ ಮಾಡಲು ಕೊಂಡುಹೋಗುತ್ತಿರುವುದಾಗಿ ಆರೋಪಿಗಳು ತಿಳಿಸಿರುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ 88,700/- ರೂಪಾಯಿ ಮೌಲ್ಯದ 8.790 ಕೆಜಿ 5 ಕಟ್ಟು ಪ್ಲಾಸ್ಟಿಕ್ ಸಹಿತ ಗಾಂಜಾ, ಆರೋಪಿ ಅಬ್ದುಲ್ ಮಜೀದ್ ಚಲಾಯಿಸಿಕೊಂಡು ಬಂದಿದ್ದ 1 ಲಕ್ಷ ರೂಪಾಯಿ ಮೌಲ್ಯದ ಕೆಎ19 ಎಚ್ ಕೆ 9534 ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಇತರೆ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ 2,17,460/- ರೂಪಾಯಿ ಆಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/2025 ಕಲಂ: 8(ಸಿ), 20(ಬಿ)(2)(ಬಿ) ಎನ್ ಡಿ ಪಿ ಎಸ್ ಹಾಗೂ ಕಲಂ 3(5) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment