ಬಂಟ್ವಾಳ, ಅಕ್ಟೋಬರ್ 09, 2025 (ಕರಾವಳಿ ಟೈಮ್ಸ್) : ಇಡ್ಕಿದು ಗ್ರಾಮದ ಅಳಕೆಮಜಲು ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ಅ 8 ರಂದು ನಡೆದ ವಿವಾಹ ಕಾರ್ಯಕ್ರಮದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ ನಡೆದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಈ ಬಗ್ಗೆ ಅಳಕೆಮಜಲು ನಿವಾಸಿ ಅಬುಸಾಲಿ ಆದಂ ಕುಂಞ (38) ಅವರು ಠಾಣೆಗೆ ದೂರು ನೀಡಿದ್ದು, ಇವರ ಸ್ನೇಹಿತ ಶಬೀರ್ ಯಾನೆ ಚಬ್ಬಿ ಎಂಬಾತ ಅ 8 ರಂದು ಆತ ಪ್ರೀತಿಸುವ ರಹೀಬಾ ಎಂಬಾಕೆಯ ವಿವಾಹ ನಿಖಾಹ ಕಾರ್ಯಕ್ರಮ ಅಳಿಕೆಮಜಲಿನಲ್ಲಿರುವ ಮೊಹಿದ್ದೀನ್ ಜುಮ್ಮಾ ಮಸೀದಿಯಲ್ಲಿ ನಡೆದಿದ್ದು, ನಿಖಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿಖಾಹ ಮುಗಿದ ನಂತರ ಮದ್ಯಾಹ್ನ 1 ಗಂಟೆ ವೇಳೆಗೆ ಅಬುಸಾಲಿ ಆದಂ ಕುಂಞÂ ಅವರು ಮಸೀದಿಯ ಜಗಲಿಯಲ್ಲಿ ಮದುಮಗ ಶಬೀರ್ ಯಾನೆ ಚಬ್ಬಿಗೆ ಶುಭ ಹಾರೈಸುತ್ತಿದ್ದಾಗ ಅಬ್ದುಲ್ ರಹಿಮಾನ್ ಎಂಬಾತ ಬಂದು ಇದ್ದಕ್ಕೆಲ್ಲಾ ಅವನೇ ಕಾರಣ ಅವನನ್ನು ಬಿಡಬೇಡಿ ಹೊಡೆಯಿರಿ ಎಂದಾಗ ರೈಯೀಸ್ ಎಂಬಾತನು ಮಸೀದಿಯ ಗಂಟೆ ಭಾರಿಸುವ ರಾಡಿನಿಂದ ಅಬುಸಾಲಿ ಆದಂ ಕುಂಞÂಯ ಹಣೆಗೆ ಹೊಡೆದು ಗಾಯಗೊಳಿಸಿದ್ದಲ್ಲದೇ, ಅಬ್ದುಲ್ ರಹಿಮಾನ್, ಅಬ್ದುಲ್ ಖಾದರ್, ರಾಝಿಕ್, ಶಾಫಿ, ಸ್ವಯೂಬ್ ಅವರು ನೆಲಕ್ಕೆ ದೂಡಿ ಹಾಕಿ ಕಾಲಿನಿಂದ ಕಾಲುಗಳಿಗೆ ಮತ್ತು ಬೆನ್ನಿಗೆ ತುಳಿದಾಗ ಅಬುಸಾಲಿ ಆದಂ ಕುಂಞÂ ಅವರು ತಪ್ಪಿಸಿಕೊಂಡು ಮಸೀದಿ ಅಂಗಳಕ್ಕೆ ಓಡಿ ಹೋದಾಗ ಅಬ್ದುಲ್ ಖಾದರ್ ಕಲ್ಲನ್ನು ಎಸೆದು ಅಬುಸಾಲಿ ಆದಂ ಕುಂಞÂ ಅವರ ಎಡ ಕಾಲಿನ ಹೆಬ್ಬೆರಳಿಗೆ ಗಾಯಗಳಾಗಿವೆ. ಈ ವೇಳೆ ಮದುವೆಗೆ ಬಂದಿದ್ದ ನಾಸೀರ್ ಅಶ್ರಫ್ ಹನೀಫ್ ಅವರು ಹಲ್ಲೆ ಮಾಡದಂತೆ ತಡೆದಿದ್ದಾರೆ ಎಂದು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/2025 ಕಲಂ 118(1), 115(2), 351(2) ಆರ್/ಡಬ್ಲ್ಯು 190 ಬಿ ಎನ್ ಎಸ್-2023 ಪ್ರಕಾರ ಪ್ರಕರಣ ದಾಖಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಅಳಕೆಮಜಲು ನಿವಾಸಿ ಅಹಮದ್ ರಯೀಸ್ (21) ಅವರು ಪ್ರತಿ ದೂರು ನೀಡಿದ್ದು. ಅಹಮದ್ ರಈಸ್ ಅವರ ತಂಗಿ ಆಯಿಷತ್ ರಹಿಬಾಳನ್ನು ಕಬಕ-ವಿದ್ಯಾಪುರ ನಿವಾಸಿ ಶಾಬೀರ್ ಯಾನೆ ಚಬ್ಬಿ (ಸಂಶೀರ್) ಎಂಬಾತನು ಪ್ರಿತಿಸುತ್ತಿದ್ದು, ಮದುವೆ ಮಾಡಿಕೊಡಲು ಮನೆಯವರ ಒಪ್ಪಿಗೆ ಇರದೇ ಇದ್ದ ಕಾರಣ ಅ 7 ರಂದು ಮದ್ಯಾಹ್ನ ವೇಳೆ ತಂಗಿ ಆಯಿಷತ್ ರಹಿಬಾಳನ್ನು ಶಾಬೀರ್ ಯಾನೆ ಚಬ್ಬಿ ಎಂಬಾತನು ಕರೆದುಕೊಂಡು ಹೋಗಿ ಇಬ್ಬರೂ ಜೊತೆಯಲ್ಲಿ ಇರುವುದಾಗಿ ತಿಳಿಸಿದಾಗ ರಯೀಸ್, ಅವರ ತಂದೆ ಅಬ್ದುಲ್ ಖಾದರ್ ಹಾಗೂ ಅಜ್ಜ ಅಬ್ದುಲ್ ರಹಿಮಾನ್ ಅವರು ಸಂಪ್ರದಾಯದಂತೆ ವಿವಾಹ ನಿಖಾಹವನ್ನು ಮಾಡಿಕೊಡುವ ಬಗ್ಗೆ ನಾಸೀರ್ ಕೊಳ್ಪೆ ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮಾಡಿ, ಅದರಂತೆ ಅ 8 ರಂದು ಅಳಕೆಮಜಲು ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ಆಯಿಷತ್ ರಹಿಬಾ ಮತ್ತು ಶಾಬೀರ್ ಯಾನೆ ಚಬ್ಬಿ ಅವರ ವಿವಾಹ ಕಾರ್ಯಕ್ರಮ ಮುಗಿದ ನಂತರ ರಯೀಸ್ ಮಸೀದಿಯ ಜಗಳಿಯಲ್ಲಿರುವಾಗ ಮಧ್ಯಾಹ್ನ 12.50 ರ ವೇಳೆಗೆ ಶಾಬೀರ್ ಯಾನೆ ಚಬ್ಬಿಯ ಕಡೆಯಿಂದ ಬಂದಿದ್ದ ಅಬುಸಾಲಿ ಆದಂ ಕುಂಞ, ಅಶ್ರಫ್, ಉಮ್ಮರ್, ರಜಾಕ್ ಅವರು ಮಸೀದಿಯಲ್ಲಿ ವಿವಾಹ ಮಾಡಿದ ಬಗ್ಗೆ ಆಕ್ಷೇಪಿಸಿದಾಗ ರಯೀಸ್, ಅವರ ತಂದೆ ಅಬ್ದುಲ್ ಖಾದರ್ ಹಾಗೂ ಅಜ್ಜ ಅಬ್ದುಲ್ ರಹಿಮಾನ್ ಅವರು ವಿವಾಹ ಮಾತುಕತೆಯ ಮೂಲಕ ಸರಿಯಾಗಿಯೇ ನಡೆದಿದೆ ಎಂದು ಹೇಳಿದಾಗ ಅಬುಸಾಲಿ ಆದಂ ಕುಂಞ ಎಂಬಾತನು ರಯೀಸ್ ಅವರಿಗೆ ಅವಾಚ್ಯವಾಗಿ ಬೈದು ನೀನು ಯಾರು ಮಾತನಾಡಲು ಎಂದು ಕೊರಳು ಪಟ್ಟಿಯನ್ನು ಹಿಡಿದು ಎಡ ಕೆನ್ನೆಗೆ ಮತ್ತು ಕುತ್ತಿಗೆಯ ಎರಡು ಭಾಗಕ್ಕೆ ಕೈಯಿಂದ ಹೊಡೆದಾಗ ಅಶ್ರಫ್, ಉಮ್ಮರ್, ರಜಾಕ್ ಅವರು ರಯೀಸ್ ಅವರನ್ನು ನೆಲಕ್ಕೆ ದೂಡಿ ಹಾಕಿ ಹೊಟ್ಟೆಗೆ ಕೈಗಳಿಂದ ಗುದ್ದಿದಾಗ ಅಬುಸಾಲಿ ಆದಂ ಕುಂಞ ಎಂಬಾತನು ಮಸೀದಿಯ ವಠಾರದಿಂದ ಕಬ್ಬಿಣದ ಸರಳನ್ನು ತಂದು ಎಡ ಕೋಲು ಕೈಗೆ ಹೊಡೆದಾಗ ಅಲ್ಲಿ ಸೇರಿದವರು ಅವರನ್ನು ತಡೆದಿದ್ದಾರೆ. ಈ ಸಂದರ್ಭ ಹಲ್ಲೆ ಮಾಡುವುದನ್ನು ನಿಲ್ಲಿಸಿದ್ದು, ಅಶ್ರಫ್ ಎಂಬಾತ ರಯೀಸ್ ಅವರನ್ನುದ್ದೇಶಿಸಿ ಮುಂದೆ ಮದುವೆ ವಿಚಾರದಲ್ಲಿ ಮಾತನಾಡಿದರೆ ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುರುತ್ತಾನೆ ಎಂದು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 144/2025 ಕಲಂ 352, 118(1), 115(2), 351(2) ಆರ್/ಡಬ್ಲ್ಯು 3(5) ಬಿ ಎನ್ ಎಸ್-2023ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment