ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ, ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ - Karavali Times ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ, ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ - Karavali Times

728x90

2 October 2025

ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ, ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

ಬಂಟ್ವಾಳ, ಅಕ್ಟೋಬರ್ 02, 2025 (ಕರಾವಳಿ ಟೈಮ್ಸ್) : ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ, ಗಾಂಧೀ ಜಯಂತಿ ಪ್ರಯುಕ್ತ ಗಾಂಧೀಜಿ ಬದುಕು ಆಧರಿಸಿದ ರಸ ಪ್ರಶ್ನೆ ಹಾಗೂ ತರಬೇತಿ ಕಾರ್ಯಾಗಾರವು ಬಿ ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಗುರುವಾರ ನಡೆಯಿತು.

ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾದ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನೂತನ ಜಿಲ್ಲಾಧ್ಯಕ್ಷ ಅಶ್ಫಾಕ್ ಅಹ್ಮದ್ ವಿದ್ಯಾರ್ಥಿ ವೇತನ ವಿತರಿಸಿದರು. 

ಬಂಟ್ವಾಳ ಎಸ್ ವಿ ಎಸ್ ದೇವಳ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಕೆ ಎನ್ ಗಂಗಾಧರ ಆಳ್ವ, ಸಂಸ್ಥೆಯ ಅಜೀವ ಸದಸ್ಯ ಬಿ ಕೆ ಅಬ್ದುಲ್ಲಾ ಕುಂಞÂ ಹಾಜಿ ಬೈರಿಕಟ್ಟೆ, ಮಂಗಳೂರು ಎ ಜೆ ಆಸ್ಪತ್ರೆಯ ಹಿರಿಯ sಸ್ಥಾನಿಕ ವೈದ್ಯೆ ಡಾ ಹಸೀನಾ ಅತಿಥಿಗಳಾಗಿ ಭಾಗವಹಿಸಿದರು. 

ಸಂಸ್ಥೆಯ ಜಿಲ್ಲಾ ಘಟಕದ ಪೂರ್ವಾಧ್ಯಕ್ಷರಾದ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಕೆ ಕೆ ಶಾಹುಲ್ ಹಮೀದ್, ಜಿದ್ದಾ ಘಟಕದ ಪೂರ್ವಾಧ್ಯಕ್ಷ ಮೊಹಮ್ಮದ್ ಸಾಹೇಬ್ ಕಾರ್ಕಳ, ಬಂಟ್ವಾಳ ಘಟಕದ ಪೂರ್ವಾಧ್ಯಕ್ಷ ರಶೀದ್ ವಿಟ್ಲ, ಸಂಸ್ಥೆಯ ತಾಲೂಕು ಘಟಕದ ಪೂರ್ವಾದ್ಯಕ್ಷರಾದ ಹಾಜಿ ಪಿ ಮುಹಮ್ಮದ್ ರಫೀಕ್ ಆಲಡ್ಕ, ನೋಟರಿ ಅಬೂಬಕ್ಕರ್ ವಿಟ್ಲ, ಪ್ರಮುಖರಾದ ಹಂಝ ಆನಿಯಾ ಬಸ್ತಿಕೋಡಿ, ವಿ ಎಚ್ ಅಶ್ರಫ್ ವಿಟ್ಲ, ಕೆ ಎಸ್ ಮೊಹಮ್ಮದ್, ಅರ್ಶದ್ ಸರವು, ಹಾಜಿ ಡಿ ಪಿ ಅಹ್ಮದ್ ಶಾಫಿ, ಹಾಜಿ ಅಬ್ದುಲ್ ರಝಾಕ್ ಗೋಳ್ತಮಜಲು, ಟಿ ಕೆ ಮುಹಮ್ಮದ್ ಟೋಪೆÇ್ಕೀ, ಅಬೂಬಕ್ಕರ್ ಪುತ್ತು, ಇಬ್ರಾಹಿಂ ಮೊಯಿದಿನ್ ನಂದಾವರ, ಅಶ್ರಫ್ ಸಾಲೆತ್ತೂರು ಮೊದಲಾದವರು ಭಾಗವಹಿಸಿದ್ದರು. 

ಉಪನ್ಯಾಸಕ ಹಾಗೂ ರಾಜ್ಯ ಮಟ್ಟದ ತರಬೇತುದಾರ ಅಬ್ದುಲ್ ರಝಾಕ್ ಅನಂತಾಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಇದೇ ವೇಳೆ ಕೈಯಲ್ಲಿ ಪೂರ್ತಿ ಕುರ್ ಆನ್ ಬರೆದು ಸಾಧನೆ ಮಾಡಿರುವ ವಿದ್ಯಾರ್ಥಿನಿಯರಾದ ಸಜ್ಲ ಇಸ್ಮಾಯಿಲ್ ಹಾಗೂ ಫಾತಿಮತ್ ಅಬೀರ ಅವರನ್ನು ಸನ್ಮಾನಿಸಲಾಯಿತು.  ಜಮೀಯ್ಯತುಲ್ ಫಲಾಹ್ ದ ಕ ಮತ್ತು ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶ್ಫಾಕ್ ಅಹ್ಮದ್ ಕಾರ್ಕಳ, ಪತ್ರಿಕಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಲತೀಫ್ ನೇರಳಕಟ್ಟೆ ಹಾಗೂ ಸ್ಕೌಟ್ಸ್ ನಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪುರಸ್ಕೃತರಾದ ಸಂಸ್ಥೆಯ ತಾಲೂಕು ಘಟಕದ ಪೂರ್ವಾದ್ಯಕ್ಷ ಬಿ ಎಂ ತುಂಬೆ ಅವರನ್ನು ಗೌರವಿಸಲಾಯಿತು. ಜಿಲ್ಲಾ ಮಟ್ಟದ ಸ್ಕೇಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಫಾತಿಮತ್ ಸೈದಾ ಅವರಿಗೆ ಪೆÇ್ರೀತ್ಸಾಹ ಧನ ನೀಡಿ ಅಭಿನಂದಿಸಲಾಯಿತು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಕೀಂ ಕಲಾಯಿ ಸ್ವಾಗತಿಸಿ, ಉಪಾಧ್ಯಕ್ಷ ಆಸಿಫ್ ಇಕ್ಬಾಲ್ ಕುಂಪಣಮಜಲು ವಂದಿಸಿದರು. ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ, ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ Rating: 5 Reviewed By: karavali Times
Scroll to Top