ಬಂಟ್ವಾಳ, ಅಕ್ಟೋಬರ್ 02, 2025 (ಕರಾವಳಿ ಟೈಮ್ಸ್) : ಉಸ್ತಾದುಲ್ ಅಸಾತೀದ್ ಮರ್ ಹೂಂ ಶೈಖುನಾ ಮಿತ್ತಬೈಲು ಉಸ್ತಾದರ ಮನೆಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉಸ್ತಾದರ ತಾತ ಪಿತರಾದ ಹಝ್ರತ್ ಶೈಖ್ ಗುಲಾಂ ಮುಹಮ್ಮದ್ ಅಹ್ಮದ್ ಮೌಲಾ ಅನ್ನಕ್ಷಬಂಧೀ (ಖಸಿ) ಅವರ 148ನೇ ಆಂಡ್ ನೇರ್ಚೆ ಅಕ್ಟೋಬರ್ 5 ರಂದು ಭಾನುವಾರ ಉಸ್ತಾದ್ ಹೌಸ್ ಮಿತ್ತಬೈಲು ಇಲ್ಲಿ ನೆರವೇರಲಿದೆ.
ಸುಬುಹಿ ನಮಾಝ್ ಬಳಿಕ ಮಿತ್ತಬೈಲು ಮುದರ್ರಿಸ್ ಉಮರ್ ಫಾರೂಕ್ ಫೈಝಿ ಪೈವಳಿಕೆ ಅವರ ನೇತೃತ್ವದಲ್ಲಿ ಕೂಟು ಝಿಯಾರತ್, ಬೆಳಿಗ್ಗೆ 6 ಗಂಟೆಗೆ ಮಿತ್ತಬೈಲು ಖತೀಬ್ ಅಬ್ಬಾಸ್ ಫೈಝಿ ಪುತ್ತಿಗೆ ಅವರ ನೇತೃತ್ವದಲ್ಲಿ ಖತ್ಮುಲ್ ಕುರ್-ಆನ್, ಬೆಳಿಗ್ಗೆ 10 ಗಂಟೆಗೆ ಹಖೀಖತ್ ಮಾಲಾ ಆಲಾಪಣೆ ನಡೆಯಲಿದ್ದು, ಶೈಖುನಾ ಬೆಳ್ಳೂರು ಉಸ್ತಾದ್ ದುವಾ ನೆರವೇರಿಸುವರು. ಮುಹ್ಸಿನ್ ಉಸ್ತಾದ್ ಪರ್ಲಿಯಾ ಅವರು ನೇತೃತ್ವ ವಹಿಸುವರು.
ರಾತ್ರಿ ಇಶಾ ನಮಾಝ್ ಬಳಿಕ ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ ಹಾಗೂ ಅಬ್ಬಾಸ್ ಫೈಝಿ ಪುತ್ತಿಗೆ ಅವರ ನೇತೃತ್ವದಲ್ಲಿ ನಕ್ಷಬಂಧೀ ಮೌಲಿದ್ ಹಾಗೂ ದುವಾ ಮಜ್ಲಿಸ್ ನಡೆಯಲಿದೆ. ರಾತ್ರಿ 9 ಗಂಟೆಗೆ ತಬರ್ರುಕ್ ವಿತರಣೆ ನಡೆಯಲಿದೆ ಎಂದು ಮರ್ ಹೂಂ ಮಿತ್ತಬೈಲ್ ಉಸ್ತಾದರ ಪುತ್ರ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















0 comments:
Post a Comment