ಮಂಗಳೂರು, ಅಕ್ಟೋಬರ್ 31, 2025 (ಕರಾವಳಿ ಟೈಮ್ಸ್) : ಜೋಸಫ್ ಮಥಾಯಸ್ ಅವರಿಗೆ ಸಮಾಜ ಸೇವೆ ಅಥವಾ ಕಲಾ ಕ್ಷೇತ್ರದಲ್ಲಿ ನೀಡಿದ ಸೇವೆಗಾಗಿ ಕರ್ನಾಟಕ ರಾಜ್ಯ ಸರಕಾರ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಮಂಗಳೂರು-ಶಿಬ್ರಿಕೆರೆ ನಿವಾಸಿಯಾಗಿರುವ ಮೆರಿಟ್ ಪ್ರೈಟ್ ಸಿಸ್ಟಂ ಕಂಪೆನಿ ಎಲ್.ಎಲ್.ಸಿ. ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಜೋಸಫ್ ಮಥಾಯಸ್ ಅವರು ಕನ್ನಡ ಭಾಷೆ, ಸಂಸ್ಕೃತಿ ಕಲೆಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಕನ್ನಡ ಭಾಷೆ ಹಾಗೂ ಕಲೆಗಳ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಕನ್ನಡ ಪರ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಕನ್ನಡಪರ ಸಂಘಟಟನೆಗಳಿಗೆ ಸದಾ ಬೆಂಬಲ ನೀಡುತ್ತಾ ಬಂದಿರುವ ಇವರು ಕಲಾ ಪೆÇೀಷಕರಾಗಿದ್ದಾರೆ. ಯಕ್ಷಗಾನ ಸಹಿತ ಇತರ ಸಾಂಸ್ಕೃತಿಕ ಕಲೆಗಳಾದ, ಕುರುಕುರು ಮಾಮ, ಬಾಳಸಂತ್, ಧಪ್ ಮೊದಲಾದ ಕಲೆಗಳಿಗೆ ಸದಾ ಪೆÇ್ರೀತ್ಸಾಹ ನೀಡುತ್ತಾ ಬಂದಿರುವ ಇವರು ಸಮಾಜದ ಬಡವರ ಬಗ್ಗೆ ಅತೀವ ಕಾಳಜಿ ವಹಿಸಿ ಅನೇಕ ಸಾಮಾಜಿಕ ಕಾರ್ಯವನ್ನು ನಿರ್ವಹಿಸಿದ್ದಾರೆ.
ಕರಾವಳಿ ವಿಭಾಗದ ಹಲವಾರು ಶಾಲೆ, ದೇವಾಲಯ, ರಂಗ ಮಂದಿರ ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ಪೆÇೀಷಕರಾಗಿದ್ದು, ಇದರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸಹಾಯ, ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ ಧನ, ಬಡ ಮಕ್ಕಳಿಗೆ ವಿದ್ಯಾರ್ಜನೆಗೆ ಆರ್ಥಿಕ ಸಹಾಯ ನೀಡುತ್ತಾ ಬಂದಿರುವ ಮಥಾಯಸ್ ಗ್ರಾಮೀಣ ಅಭಿವೃದ್ಧಿ ಚಟುವಟಿಕೆಯಲ್ಲಿ ನಿರಂತರ ಭಾಗವಹಿಸುವಿಕೆ, ಗ್ರಾಮೀಣ ಪ್ರದೇಶಗಳಲ್ಲಿ ಸೌಹಾರ್ದ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ, ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಜನ ಮನ್ನಣೆ ಗಳಿಸಿದ್ದಾರೆ. ಸಾರ್ವಜನಿಕ ಕಾರ್ಯಕರ್ತರಾಗಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ಸಾಮಾಜಿಕ ಸೇವೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರೆತಿದ್ದು, ಇವರ ಸೇವೆಯನ್ನು ಗುರುತಿಸಿ ಸಮಾಜ ಸೇವೆ ಮತ್ತು ಕಲಾ ಕ್ಷೇತ್ರಗಳಲ್ಲಿ ನೀಡಿರುವ ಗಣನೀಯ ಸೇವೆಗೆ ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.















0 comments:
Post a Comment