ಮಂಗಳೂರು-ಪೊಳಲಿ ಮಧ್ಯೆ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭ - Karavali Times ಮಂಗಳೂರು-ಪೊಳಲಿ ಮಧ್ಯೆ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭ - Karavali Times

728x90

3 October 2025

ಮಂಗಳೂರು-ಪೊಳಲಿ ಮಧ್ಯೆ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭ

ಮಂಗಳೂರು, ಅಕ್ಟೋಬರ್ 03, 2025 (ಕರಾವಳಿ ಟೈಮ್ಸ್) : ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ 3ನೇ ಘಟಕದಿಂದ ಮಂಗಳೂರು ಬಸ್ಸು ನಿಲ್ದಾಣದಿಂದ ವಯಾ ನಂತೂರು-ವಾಮಂಜೂರು-ಕೆತ್ತಿಕಲ್ ಬೊಂಡಂತಿಲ-ತಾರಿಗುಡ್ಡೆ ಮಾರ್ಗವಾಗಿ ಪೊಳಲಿಗೆ ನೂತನ ನಗರ ಸಾರಿಗೆಯನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾರಂಭಿಸಲಾಗಿದ್ದು, ಶಾಸಕ ಭರತ್ ಶೆಟ್ಟಿ ಸೆ 2 ರಂದು ಮಂಗಳೂರು ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಚಾಲನೆ ನೀಡಿದರು. 

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ವಿಭಾಗೀಯ ಸಂಚಾರ ಅಧಿಕಾರಿ ಕಮಲ್ ಕುಮಾರ್, ವಿಭಾಗೀಯ ಯಾಂತ್ರಿಕ ಅಭಿಯಂತರ ವಿನಯ್ ಹಾಗೂ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು, ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಭಾಗವಹಿಸಿದ್ದರು. 

ಮಂಗಳೂರು-ಪೊಳಲಿ ಮಾರ್ಗದ ನೂತನ ನಗರ ಸಾರಿಗೆ ವೇಳಾಪಟ್ಟಿ ವಿವರ :

ಮಂಗಳೂರು ಬಸ್ಸು ನಿಲ್ದಾಣದಿಂದ ಪೊಳಲಿಗೆ ಹೊರಡುವ ಸಮಯ ಬೆಳಿಗ್ಗೆ 6 ಗಂಟೆ, 8:45, 11:40, 3:30, 6:30. ವಯಾ : ಪಿ.ವಿ.ಎಸ್, ಬಂಟ್ಸ್ ಹಾಸ್ಟೆಲ್, ನಂತೂರು, ಬಿಕರ್ನಕಟ್ಟೆ, ಕುಲಶೇಖರ, ಬೈತುರ್ಲಿ, ಕುಡುಪು, ವಾಮಂಜೂರು, ಕೆತ್ತಿಕಲ್, ಬೊಂಡಂತಿಲ, ತಾರಿಗುಡ್ಡೆ, ಬದ್ರಿಯಾ ನಗರ, ಮಲ್ಲೂರು, ಕಲಾಯಿ, ಅಮ್ಮುಂಜೆ, ಬಡಕಬೈಲು, ಪುಂಚಮೆ.

ಪೊಳಲಿಯಿಂದ ಮಂಗಳೂರಿಗೆ ಹೊರಡುವ ಸಮಯ : ಬೆಳಿಗ್ಗೆ 6:55, 10:10, 1:50, 4:35, 8 ಗಂಟೆ ವಯಾ ಸ್ಥಳಗಳು : ಪುಂಚಮೆ, ಬಡಕಬೈಲು, ಅಮ್ಮುಂಜೆ ಕಲಾಯಿ, ಮಲ್ಲೂರು, ಬದ್ರಿಯಾ ನಗರ, ತಾರಿಗುಡ್ಡೆ, ಬೊಂಡಂತಿಲ, ಕೆತ್ತಿಕಲ್, ವಾಮಂಜೂರು, ಕುಡುಪು, ಬೈತುರ್ಲಿ, ಕುಲಶೇಖರ, ಬಿಕರ್ನಕಟ್ಟೆ, ನಂತೂರು, ಬಂಟ್ಸ್ ಹಾಸ್ಟೆಲ್, ಪಿವಿಎಸ್.

ಸಾರ್ವಜನಿಕ ಪ್ರಯಾಣಿಕರು ಸಾರಿಗೆಯ ಅನುಕೂಲ ಪಡೆದುಕೊಳ್ಳಬಹುದು ಎಂದು ಮಂಗಳೂರು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು-ಪೊಳಲಿ ಮಧ್ಯೆ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭ Rating: 5 Reviewed By: karavali Times
Scroll to Top