ಬಂಟ್ವಾಳ, ಅಕ್ಟೋಬರ್ 28, 2025 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ವಾಮದಪದವು ಚೆನ್ನೈತ್ತೋಡಿ ಗ್ರಾಮದ ಅಂತರಗುತ್ತು ನಿವಾಸಿ ನಾರಾಯಣ ಕುಲಾಲ್ (70) ಅವರು ಅಕ್ಟೋಬರ್ 18ರಂದು ಮನೆಯಿಂದ ಹೋದವರು ಇದುವರೆಗೆ ವಾಪಾಸು ಬಾರದೆ ಕಾಣೆಯಾಗಿರುವ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 5.5 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಕಪ್ಪು-ಬಿಳಿ ಮಿಶ್ರಿತ ಕೂದಲು, ಕೋಲು ಮುಖ ಹೊಂದಿರುವ ಇವರು ತುಳು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಕಂದು ನೀಲಿ ಬಣ್ಣದ ಲುಂಗಿ, ನೀಲಿ ಗೆರೆಗಳಿರುವ ಬಣ್ಣದ ಅರ್ಧ ತೋಳಿನ ಶರ್ಟ್ ಧರಿಸಿದ್ದರು. ಇವರ ಇರುವಿಕೆ ಬಗ್ಗೆ ತಿಳಿದವರು ಪೂಂಜಾಲಕಟ್ಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

















0 comments:
Post a Comment