ಬಂಟ್ವಾಳ, ಅಕ್ಟೋಬರ್ 28, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ ಹಂತದ ಕಾಮಗಾರಿಯ ಪ್ರಗತಿ ಬಗ್ಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ತಮ್ಮ ಕಚೇರಿಯಲ್ಲಿ ಪುರಸಭಾಧ್ಯಕ್ಷರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಸಂಬಂಧಿಸಿ ಒಟ್ಟು 7 ವಲಯಗಳ ಪೈಕಿ 1ನೇ ವಲಯದ ಕಾಮಗಾರಿಯ ಪ್ರಗತಿ ಎಲ್ಲರಿಗೂ ತೃಪ್ತಿ ತಂದಿದೆ. 2ನೇ ವಲಯದ ಕಾಮಗಾರಿ ಪೂರ್ತಿಗೊಳಿಸಲು ನವೆಂಬರ್ 16ರವರೆಗೆ ಸಮಯಾವಕಾಶ ನೀಡಲಾಗಿದೆ. ಪುರಸಭಾ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆಗೆ ಈಗಾಗಲೇ ಅನುದಾನ ಬಿಡುಗಡೆಗೊಂಡಿದ್ದು, ಜಾಗದ ಸಮಸ್ಯೆಗಳನ್ನು ಸರಿ ಮಾಡುವುದಕ್ಕೆ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ. ಒಟ್ಟು ಕಾಮಗಾರಿಯನ್ನು 45 ಕೋಟಿ ರೂಪಾಯಿ ಹಾಗೂ 14.5 ಕೋಟಿ ರೂಪಾಯಿಗಳ ಎರಡು ವಿಭಾಗ ಮಾಡಿದ್ದೇವೆ. ಒಟ್ಟು 7 ವೆಟ್ ವೆಲ್‍ಗಳ ಪೈಕಿ 5 ವೆಟ್ ವೆಲ್ ಗಳನ್ನು ಪೂರ್ತಿಗೊಳಿಸಲಾಗುತ್ತದೆ ಎಂದರು.
ಈ ಸಂದರ್ಭ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಸದಸ್ಯರಾದ ಎ ಗೋವಿಂದ ಪ್ರಭು, ಹರಿಪ್ರಸಾದ್ ಭಂಡಾರಿಬೆಟ್ಟು, ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಸಿ, ಪುರಸಭಾ ಮುಖ್ಯಾಧಿಕಾರಿ ಮತ್ತಡಿ, ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಇಂಜಿನಿಯರ್ ಶೋಭಾಲಕ್ಷ್ಮೀ, ಪಿಡಿಎಂಸಿ ಇಂಜಿನಿಯರುಗಳಾದ ಹೇಮಂತ್, ಅನೀಶ್, ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಭಾಗವಹಿಸಿದ್ದರು.


















0 comments:
Post a Comment