ಪುತ್ತೂರು, ಅಕ್ಟೋಬರ್ 12, 2025 (ಕರಾವಳಿ ಟೈಮ್ಸ್) : ಪುತ್ತೂರು ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ 7 ಮಂದಿ ಫಲಾನುಭವಿಗಳಿಗೆ ಒಟ್ಟು 2,70,561 ಲಕ್ಷ ರೂಪಾಯಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರಧನ ಬಿಡುಗಡೆಯಾಗಿದೆ.
ಬೆಳ್ತಂಗಡಿ ತಾಲೂಕಿನ ಇಳಂತಿಲ ಕಡವಿನ ಬಾಗಿಲು ನಿವಾಸಿ ಸಿದ್ದಿಕ್ ಅವರಿಗೆ 7 ಸಾವಿರ ರೂಪಾಯಿ, ಒಳಮೊಗ್ರು ಗ್ರಾಮದ ಬೊಳ್ಳಾಡಿ ನಿವಾಸಿ ಹರಿಪ್ರಸಾದ ಡಿ ಅವರಿಗೆ 19,918 ರೂಪಾಯಿ, ಒಳಮೊಗ್ರು ಗ್ರಾಮದ ನೀರ್ಪಾಡಿ ನಿವಾಸಿ ಸಾಯಿನಿಧಿಗೆ ಅವರಿಗೆ 15 ಸಾವಿರ ರೂಪಾಯಿ, ರಂಜನ್ ಮಂಗಳೂರು ಅವರಿಗೆ 98 ಸಾವಿರ ರೂಪಾಯಿ, ಖತೀಜತ್ ರಾಫಿಯ ಬಂಟ್ವಾಳ ಇವರಿಗೆ 1 ಲಕ್ಷ ರೂಪಾಯಿ, ರಾಜೀವಿ ಸರ್ವೆ ಅವರಿಗೆ 20,675/- ರೂಪಾಯಿ ಹಾಗೂ ಗೋಳ್ತಮಜಲು-ಪೂರ್ಲಿಪ್ಪಾಡಿ ನಿವಾಸಿ ಒಮಯ ಅವರಿಗೆ 19,918/- ರೂಪಾಯಿ ಪರಿಹಾರ ಧನ ಮಂಜೂರಾಗಿದೆ. ಪರಿಹಾರ ಧನವು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಗೊಳ್ಳಲಿದೆ.
0 comments:
Post a Comment