ಸುಳ್ಯ, ಅಕ್ಟೋಬರ್ 14, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ಸುಳ್ಯ ತಾಲೂಕಿನ ಗುತ್ತಿಗಾರು ಶಾಖೆ ಗುತ್ತಿಗಾರು ಮುಖ್ಯ ರಸ್ತೆಯ ರಾಘವೇಂದ್ರ ಕಾಂಪ್ಲೆಕ್ಸಿನ ಪ್ರಥಮ ಅಂತಸ್ತಿಗೆ ಸ್ಥಳಾಂತರಗೊಂಡಿದ್ದು, ಇದರ ಉದ್ಘಾಟನೆ ಹಾಗೂ ಎಟಿಎಂ ಉದ್ಘಾಟನೆ ಅ 13 ರಂದು ನಡೆಯಿತು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಡಿಸಿಸಿ ಬ್ಯಾಂಕ್ ಸಹಕಾರಿ ಸಂಘಗಳಿಗೆ ಬೆನ್ನೆಲುಬಾಗಿ ನಿಂತಿದೆ. ಸ್ವಸಹಾಯ ಸಂಘಗಳನ್ನು ರಚಿಸಿ, ಮಹಿಳೆಯರ ಸಬಲೀಕರಣಕ್ಕೂ ಪೆÇ್ರೀತ್ಸಾಹ ನೀಡುತ್ತಾ ಬಂದಿದೆ. ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಬ್ಯಾಂಕಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಅದರಂತೆ ಬೆಳೆಯುತ್ತಿರುವ ಗುತ್ತಿಗಾರು ಪೇಟೆಯಲ್ಲಿನ ಶಾಖೆಯಲ್ಲೂ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿರುವುದು ಗ್ರಾಹಕರಿಗೂ, ಇಲ್ಲಿನ ಅಭಿವೃದ್ಧಿಗೂ ಪೂರಕವಾಗಲಿದೆ ಎಂದರು.
ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ಶಾಖೆ ಉದ್ಘಾಟಿಸಿದರು. ನಿರ್ದೇಶಕ ಕುಶಾಲಪ್ಪ ಗೌಡ ಎಟಿಎಂ ಕೇಂದ್ರ ಉದ್ಘಾಟಿಸಿದರು. ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭದ್ರತಾ ಕೋಶ ಉದ್ಘಾಟಿಸಿದರು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಠೇವಣಿಪತ್ರ ವಿತರಿಸಿದರು. ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ಗ್ರಾಹಕರಿಗೆ ಲಾಕರ್ ಕೀ ವಿತರಿಸಿದರು. ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ ಹೊಸ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಿದರು.
ಇದೇ ವೇಳೆ ಕಟ್ಟಡ ಮಾಲಕ ಅನಿಲ್ ಕುಮಾರ್, ಶಾಖಾ ವ್ಯವಸ್ಥಾಪಕ ಕುಶಾಲಪ್ಪ ಗೌಡ ಯು., ಶಾಖೆಯ ಉದ್ಘಾಟನಾ ಮೇಲ್ವಿಚಾರಣಾ ಜವಾಬ್ದಾರಿ ವಹಿಸಿದ್ದ ಪುತ್ತೂರು ಶಾಖಾ ವ್ಯವಸ್ಥಾಪಕ ಹರೀಶ್ ಪಿ., ಬ್ಯಾಂಕ್ ಸ್ವಸಹಾಯ ಸಂಘಗಳ ಮೇಲ್ವಿಚಾರಕ ರಂಜಿತ್ ಕುಮಾರ್ ಎ., ಬ್ಯಾಂಕ್ ವಲಯ ಮೇಲ್ವಿಚಾರಕರಾದ ಮನೋಜ್ ಎಂ.ಸಿ., ಸುಬ್ರಹ್ಮಣ್ಯ ಭಟ್, ಆದರ್ಶ ಬಿ. ಅವರನ್ನು ಸನ್ಮಾನಿಸಲಾಯಿತು. ಪ್ರದೀಪ್ ಕುಮಾರ್, ರತನ್ ಕೆ.ಎಸ್., ವಿನಯ ಕುಮಾರ್ ಪಿ., ನವೋದಯ ವಲಯದ ಶ್ರೀಧರ್ ಎಂ., ದಾಮೋದರ್, ಹೇಮಂತ್, ಗಂಗಾಧರ್, ಪ್ರಕಾಶ್, ಸವಿತಾ ಎಸ್.ಟಿ., ಚಂದ್ರಕಲಾ, ಅನಿತಾ, ದೇವಕಿ ಅವರನ್ನು ಗೌರವಿಸಲಾಯಿತು.
ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಪ್ರಮುಖರಾದ ಭರತ್ ಮುಂಡೋಡಿ, ಪಿ.ಸಿ. ಜಯರಾಮ, ಕೇಶವ ಭಟ್ ಮುಳಿಯ, ವೆಂಕಟ್ ದಂಬೆÉೂೀಡಿ ಮೊದಲಾದವರು ಭಾಗವಹಿಸಿದ್ದರು.
ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಸ್ವಾಗತಿಸಿ, ಪ್ರಸ್ತಾವನೆಗೈದರು. ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಎಂ. ಕಾರ್ಯಕ್ರಮ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.














0 comments:
Post a Comment