ಬಂಟ್ವಾಳ, ಅಕ್ಟೋಬರ್ 30, 2025 (ಕರಾವಳಿ ಟೈಮ್ಸ್) : ಪುದು ಗ್ರಾಮ ಪಂಚಾಯತ್, ಪಡಿ ಸಂಸ್ಥೆ ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಂಟ್ವಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಮಟ್ಟದ ಶಿಕ್ಷಣ ಅವಲೋಕನ ಕಾರ್ಯಕ್ರಮ ಮತ್ತು ಕಾನೂನು ಅರಿವು ಕಾರ್ಯಕ್ರಮ ಪುದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅ 30 ರಂದು ನಡೆಯಿತು.
ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಡಿ ಸಂಸ್ಥೆಯ ಸಿಇಒ ರೆನ್ನಿ ಡಿ’ಸೋಜ ಶಿಕ್ಷಣ ಅವಲೋಕನ ಕಾರ್ಯಕ್ರಮ ರೂಪು ರೇಷೆ ಮತ್ತು ಉದ್ದೇಶಗಳ ಬಗ್ಗೆ ಮಾತನಾಡಿದರು. ಬಂಟ್ವಾಳ ಕಾನೂನು ಸೇವೆಗಳ ಸಮಿತಿಯ ನ್ಯಾಯವಾದಿ ಶ್ರೀಮತಿ ಸುಚಿತ್ರಾ ಕೆ ಅವರು ಕಾನೂನು ಮಾಹಿತಿ ನೀಡಿದರು.
ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ರುಕ್ಸಾನ ಬಾನು, ಪಿಡಿಒ ಡಾ ಸ್ಮೃತಿ ಯು, ಕಾರ್ಯದರ್ಶಿ ಶ್ರೀಮತಿ ಕವಿತಾ, ಆರೋಗ್ಯ ಕಾರ್ಯಕರ್ತೆ ಆಶಾ, ಪಂಚಾಯತ್ ಸದಸ್ಯರುಗಳು, ಸಂಜೀವಿನಿ ಸದಸ್ಯರು, ಪಡಿ ಸಂಸ್ಥೆಯ ಸಿಬ್ಬಂದಿಗಳು, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಡಿ ಸಂಸ್ಥೆಯ ವಿವೇಕ ಸ್ವಾಗತಿಸಿ, ಶ್ರೀಮತಿ ಅಸುಂತಾ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.



















0 comments:
Post a Comment