ಬಂಟ್ವಾಳ, ಅಕ್ಟೋಬರ್ 30, 2025 (ಕರಾವಳಿ ಟೈಮ್ಸ್) : ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಚ್ಚಿನ ಗ್ರಾಮದ ಪೇರೂರ್ ಎಂಬಲ್ಲಿ ಅ 29 ರಂದು ಸಂಭವಿಸಿದೆ.
ಮೃತರನ್ನು ಇಲ್ಲಿನ ನಿವಾಸಿ ಮಾಧವ ಗೌಡ (63) ಎಂದು ಹೆಸರಿಸಲಾಗಿದೆ. ಮನೆಯಲ್ಲೇ ಕೃಷಿ ಕೆಲಸ ಮಾಡಿಕೊಂಡಿರುವ ಇವರಿಗೆ ಅ 28 ರಂದು ಮನೆಯಲ್ಲಿದ್ದ ವೇಳೆ ಸಂಜೆ ಸುಮಾರು 6.45ರ ವೇಳೆಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡು ಮನೆಯಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಮನೆಯವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದರು ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಹೃದಯಾಘಾತ ಅಥವಾ ಇನ್ಯಾವುದೋ ಕಾಯಿಲೆಯಿಂದ ಅವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅವರ ಪುತ್ರ ಲತನ್ ಕುಮಾರ್ ಪಿ ಎಂ ಅವರು ನೀಡಿದ ದೂರಿನಂತೆ ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

















0 comments:
Post a Comment