ಕಾಮನ್ ವೆಲ್ತ್ ಸಂಸದೀಯ ಸಮಾವೇಶದಲ್ಲಿ ಸ್ಪೀಕರ್ ಯು.ಟಿ. ಖಾದರ್ ಭಾಗಿ - Karavali Times ಕಾಮನ್ ವೆಲ್ತ್ ಸಂಸದೀಯ ಸಮಾವೇಶದಲ್ಲಿ ಸ್ಪೀಕರ್ ಯು.ಟಿ. ಖಾದರ್ ಭಾಗಿ - Karavali Times

728x90

9 October 2025

ಕಾಮನ್ ವೆಲ್ತ್ ಸಂಸದೀಯ ಸಮಾವೇಶದಲ್ಲಿ ಸ್ಪೀಕರ್ ಯು.ಟಿ. ಖಾದರ್ ಭಾಗಿ

ಮಂಗಳೂರು, ಅಕ್ಟೋಬರ್ 09, 2025 (ಕರಾವಳಿ ಟೈಮ್ಸ್) : ಕೆರೆಬಿಯನ್ ಪೂರ್ವ ದ್ವೀಪ ರಾಷ್ಟ್ರವಾಗಿರುವ ಬ್ರಿಟಿಷ್ ಕಾಮನ್ ವೆಲ್ತ್ ಗಣರಾಜ್ಯವಾಗಿರುವ ಬಾಬ್ರ್ಡೋಸ್ ದೇಶದ ರಾಜಧಾನಿ ಬ್ರಿಜ್ಡ್ ಟೌನ್ ನಗರದಲ್ಲಿ ಅಕ್ಟೋಬರ್ 6 ರಿಂದ ಆರಂಭಗೊಂಡಿರುವ 68ನೇ ಕಾಮನ್ ವೆಲ್ತ್ ಸಂಸದೀಯ ಸಮಾವೇಶದಲ್ಲಿ ಲೋಕಸಭಾಧ್ಯಕ್ಷ ಒಂ ಬಿರ್ಲಾ, ರಾಜ್ಯಸಭೆಯ ಉಪಸಭಾಪತಿ ಹರಿವಂಶ, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮತ್ತಿತರರು ಪಾಲ್ಗೊಂಡಿದ್ದಾರೆ.

ಈ ಸಮಾವೇಶದಲ್ಲಿ ಜಗತ್ತಿನ ವಿವಿಧ ದೇಶಗಳ ಪ್ರತಿನಿಧಿಗಳು, ಲೋಕಸಭಾಧ್ಯಕ್ಷರು, ರಾಜ್ಯಸಭೆಯ ಉಪ ಸಭಾಪತಿಗಳು, ವಿವಿಧ ರಾಜ್ಯಗಳ ವಿಧಾನ ಸಭೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸಭಾಪತಿಗಳು, ಸಚಿವರುಗಳು, ರಾಜಕೀಯ ತಜ್ಞರು, ನೀತಿ ನಿರೂಪಕರು, ರಾಜಕೀಯ ಮುತ್ಸದ್ದಿಗಳು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕಾಮನ್ ವೆಲ್ತ್ ಸಂಸದೀಯ ಸಮಾವೇಶದಲ್ಲಿ ಸ್ಪೀಕರ್ ಯು.ಟಿ. ಖಾದರ್ ಭಾಗಿ Rating: 5 Reviewed By: karavali Times
Scroll to Top