ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿ ಕತಾರಿಗೆ ತೆರಳಿದ್ದವ ಮಂಗಳೂರು ವಿಮಾನ ನಿಲ್ದಾಣ ಎಮಿಗ್ರೇಶನ್ ಅಧಿಕಾರಿಗಳ ಬಲೆಗೆ - Karavali Times ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿ ಕತಾರಿಗೆ ತೆರಳಿದ್ದವ ಮಂಗಳೂರು ವಿಮಾನ ನಿಲ್ದಾಣ ಎಮಿಗ್ರೇಶನ್ ಅಧಿಕಾರಿಗಳ ಬಲೆಗೆ - Karavali Times

728x90

9 October 2025

ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿ ಕತಾರಿಗೆ ತೆರಳಿದ್ದವ ಮಂಗಳೂರು ವಿಮಾನ ನಿಲ್ದಾಣ ಎಮಿಗ್ರೇಶನ್ ಅಧಿಕಾರಿಗಳ ಬಲೆಗೆ

ಮಂಗಳೂರು, ಅಕ್ಟೋಬರ್ 09, 2025 (ಕರಾವಳಿ ಟೈಮ್ಸ್) : ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿ ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಮೆಗ್ರೇಷನ್ ಅಧಿಕಾರಿಗಳು ಅ 8 ರಂದು ಬಂಧಿಸಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. 

ಬಂಧಿತ ಆರೋಪಿಯನ್ನು ಮಂಗಳೂರು, ಕುದ್ರೋಳಿ-ಯಾಸೀನ್ ಕಂಪೌಂಡ್ ನಿವಾಸಿ ಮಹಮ್ಮದ್ ಸಲೀಂ ಎಂಬವರ ಪುತ್ರ ಮೊಹಮ್ಮದ್ ಸಿನಾನ್ (24) ಎಂದು ಹೆಸರಿಸಲಾಗಿದೆ. ಈತ ಉರ್ವಾ ಪೆÇಲೀಸ್ ಠಾಣೆಯಲ್ಲಿ 2021 ರಲ್ಲಿ  ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕಳೆದ 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಈತನ ವಿರುದ್ದ ನ್ಯಾಯಾಲಯವು ವಾರೆಂಟ್ ಹೊರಡಿಸಿದ್ದು, ವಾರೆಂಟ್ ಜ್ಯಾರಿಗೊಳಿಸುವ ಸಲುವಾಗಿ ಈತನ ವಿರುದ್ದ ಬ್ಯೂರೋ ಆಫ್ ಇಮಿಗ್ರೇಶನ್ ನವದೆಹಲಿ, ಭಾರತ ಸರಕಾರ ಅವರಿಂದ ಎಲ್.ಓ.ಸಿ ತೆರೆಯಲಾಗಿತ್ತು. 

ಅಕ್ಟೋಬರ್ 8 ರಂದು ಈತ ಕತಾರ್ ದೇಶದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಆತನನ್ನು ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದು ಉರ್ವಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆತನನ್ನು ಕರೆತಂದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ವಾರಂಟ್ ಅಸಾಮಿಯು ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೆ ನ್ಯಾಯಾಲಯದ ಜಾಮೀನಿನ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ಉರ್ವಾ ಪೆÇಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 100/2025  ಕಲಂ 269 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿ ಕತಾರಿಗೆ ತೆರಳಿದ್ದವ ಮಂಗಳೂರು ವಿಮಾನ ನಿಲ್ದಾಣ ಎಮಿಗ್ರೇಶನ್ ಅಧಿಕಾರಿಗಳ ಬಲೆಗೆ Rating: 5 Reviewed By: karavali Times
Scroll to Top