ಬಂಟ್ವಾಳ, ಅಕ್ಟೋಬರ್ 28, 2025 (ಕರಾವಳಿ ಟೈಮ್ಸ್) : ತಾಯಿ ಹಾಗೂ ಮಗಳು ಮೃತಪಟ್ಟ ಬಗ್ಗೆ ಮಾನಸಿಕ ಖಿನ್ನತೆಗೊಳಗಾಗಿ ಮನೆಯಿಂದ ಕಾಣೆಯಾದ ವ್ಯಕ್ತಿಯ ಮೃತದೇಹ ಮನೆ ಬಳಿಯ ಬಾವಿಯಲ್ಲಿ ಅ 26 ರಂದು ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಅಮ್ಟಾಡಿ ನಿವಾಸಿ ಯಾದವ (61) ಎಂದು ಹೆಸರಿಸಲಾಗಿದೆ. ಇವರ ಪುತ್ರಿ ನಿಶ್ಮಿತಾ ಎಂಬಾಕೆ 5 ವರ್ಷಗಳ ಹಿಂದೆ ಹಾಗೂ ತಾಯಿ ರೇವತಿ ಅವರು 4 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದೇ ಕಾರಣದಿಂದ ಮಾನಸಿಕವಾಗಿ ನೊಂದುಕೊಂಡ ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಖಿನ್ನತೆಗಾಗಿ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಮಾನಸಿಕ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಪ್ರತಿ ದಿನ ತಾಯಿ ಹಾಗೂ ಮಗಳು ಮೃತಪಟ್ಟ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಅ 23 ರಂದು ರಾತ್ರಿ 10 ಗಂಟೆಗೆ ಊಟ ಮಾಡಿ ಪತ್ನಿ ಬೇಬಿಯೊಂದಿಗೆ ಮಲಗಿದ್ದ ಯಾದವ ಅವರು ಮರುದಿನ ಅಂದರೆ ಅ 24 ರಂದು ಬೆಳಿಗ್ಗೆ 6 ಗಂಟೆಗೆ ಪತ್ನಿ ಬೇಬಿ ನೋಡಿದಾಗ ಯಾದವರು ಮನೆಯಲ್ಲಿ ಮಲಗಿದ್ದಲ್ಲಿ ಇಲ್ಲದೆ ಕಾಣೆಯಾಗಿದ್ದರು. ಬಳಿಕ ಸುತ್ತಮುತ್ತ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿದೆ ಇದ್ದ ಹಿನ್ನಲೆಯಲ್ಲಿ ಪತ್ನಿ ಬೇಬಿ ಅವರು ಅ 25 ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅ 26 ರಂದು ಬೆಳಿಗ್ಗೆ 6.30ರ ವೇಳೆಗೆ ಪತ್ನಿ ಬೇಬಿ ಅವರು ಮನೆ ಬಳಿ ಇರುವ ಬಾವಿಯನ್ನು ಇಣುಕಿ ನೋಡಿದಾಗ ಬಾವಿಯಲ್ಲಿ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ. ಗಂಡ ಯಾದವರು ಮಗಳು ಮತ್ತು ತಾಯಿ ತೀರಿ ಹೋದ ಕಾರಣ ಖಿನ್ನತೆಗೆ ಒಳಗಾಗಿದ್ದು ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಬಳಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
 
 








 
 
 
 


 



 




0 comments:
Post a Comment