ಬಂಟ್ವಾಳ, ಅಕ್ಟೋಬರ್ 28, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಇಟ್ಟು ಕಾಲೇಜಿಗೆ ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯ ದ್ವಿಚಕ್ರ ವಾಹನ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಲ್ಕಾರ್-ಎಂ ಎಚ್ ಹೈಟ್ಸ್ ನಿವಾಸಿ ಎಂ ಎ ತ್ವಾಹಾ ಎಂಬವರ ಪುತ್ರ ಮೊಹಮ್ಮದ್ ಸಲೀತ್ (18) ಎಂಬವರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇವರು ಮೂಡಬಿದ್ರೆ ತಾಲೂಕಿನ ತೋಡಾರು ಯೇನಪೆÇೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಪ್ರತಿ ದಿನ ಬೆಳಿಗ್ಗೆ ಮನೆಯಿಂದ ಕೆಎ19 ಇಯು7966 ನೋಂದಣಿ ಸಂಖ್ಯೆಯ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಬಿ ಸಿ ರೋಡಿಗೆ ಬಂದು ಎನ್ ಜಿ ವೃತ್ತದ ಬಳಿ ಆಕ್ಟಿವಾ ಹೋಂಡಾವನ್ನು ಅಲ್ಲಿಟ್ಟು ಬಳಿಕ ಕಾಲೇಜು ಬಸ್ಸಿನಲ್ಲಿ ಮೂಡಬಿದ್ರೆಗೆ ಹೋಗುವುದಾಗಿದೆ. ಅ 24 ರಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಆಕ್ಟಿವಾದಲ್ಲಿ ಹೊರಟು ಬೆಳಿಗ್ಗೆ 7.30ಕ್ಕೆ ಬಿ ಸಿ ರೋಡು ಎನ್ ಜಿ ಸರ್ಕಲಿಗೆ ಬಂದು ಅಲ್ಲಿನ ಕ್ಯಾಂಟೀನ್ ಪಕ್ಕ ಆಕ್ಟಿವಾ ಹೋಂಡಾವನ್ನಿಟ್ಟು ವಾಹನದ ಕೀಯನ್ನು ಸೀಟಿನ ಒಳಗೆ ಇಟ್ಟು ಹೋಗಿದ್ದರು. ಕಾಲೇಜು ತರಗತಿ ಮುಗಿಸಿ ಸಂಜೆ 6 ಗಂಟೆಗೆ ಸಲೀತ್ ಅವರು ದ್ವಿಚಕ್ರ ವಾಹನ ಇಟ್ಟ ಸ್ಥಳಕ್ಕೆ ಬಂದು ನೋಡಿದಾಗ ಸ್ಥಳದಲ್ಲಿ ಆಕ್ಟಿವಾ ಹೋಂಡಾ ಇರದೆ ಕಾಣೆಯಾಗಿತ್ತು. ಪರಿಸರದಲ್ಲಿ ಈ ಬಗ್ಗೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಕಳವಾದ ಆಕ್ಟಿವಾ ಹೋಂಡಾದ ಮೌಲ್ಯ 30 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸಲೀತ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















0 comments:
Post a Comment