ಸುಳ್ಯ, ಅಕ್ಟೋಬರ್ 14, 2025 (ಕರಾವಳಿ ಟೈಮ್ಸ್) : 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ನಾಟಿ ಮನೆ ನಿವಾಸಿ ಬಾಲನ್ (73) ಎಂದು ಹೆಸರಿಸಲಾಗಿದೆ.
1990ನೇ ವರ್ಷದಲ್ಲಿ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ಅಕ್ರಮ ಕೂಟ ಸೇರಿ ಶಾಂತಪ್ಪ ಮತ್ತು ಸುಬ್ಬಯ್ಯ ಎಂಬವರಿಗೆ ತಲ್ವಾರಿನಿಂದ ಕಡಿದು ತೀವ್ರ ಸ್ವರೂಪದ ಗಾಯಗೊಳಿಸಿದ್ದರು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಹಾಜರಾಗದೆ ಎಲ್ ಪಿ ಸಿ 02/2002 ರಲ್ಲಿನ ಆರೋಪಿಯನ್ನು ಕೇರಳ ರಾಜ್ಯದ ತ್ರಿಸ್ಸೂರ್ ಎಂಬಲ್ಲಿಂದ ದಸ್ತಗಿರಿ ಮಾಡಿದ ಪೊಲೀಸರು ಅ 13 ರಂದು ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದಾರೆ. ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.














0 comments:
Post a Comment