ಬಂಟ್ವಾಳ, ಅಕ್ಟೋಬರ್ 31, 2025 (ಕರಾವಳಿ ಟೈಮ್ಸ್) : ಟೋಲ್ ತಪ್ಪಿಸಲು ಕಾರು ಚಾಲಕ ಹೆದ್ದಾರಿಯಲ್ಲಿ ತಿರುವು ಪಡೆದ ಸಂದರ್ಭ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳಿಬ್ಬರು ಗಂಭೀರ ಗಾಯಗೊಂಡ ಘಟನೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪದ ತಲಪಾಡಿ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಅಡ್ಯಾರಿನ ಮೀಫ್ಸ್ ಸಂಸ್ಥೆಯ ಫೈರ್ ಆಂಡ್ ಸೇಫ್ಟಿ ವ್ಯಾಸಂಗ ಮಾಡುವ ವಿಟ್ಲ ಸಮೀಪದ ವಿದ್ಯಾರ್ಥಿಗಳಿಬ್ಬರು ತರಗತಿ ಮುಗಿಸಿ ಬೈಕಿನಲ್ಲಿ ಬಿ ಸಿ ರೋಡು ಕಡೆಗೆ ಬರುತ್ತಿದ್ದ ವೇಳೆ ತಲಪಾಡಿ ಎಂಬಲ್ಲಿ ಟೋಲ್ ಗೇಟ್ ತಪ್ಪಿಸಿ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ಉದ್ದೇಶದಿಂದ ಕಾರು ಚಾಲಕ ಕಾರು ಚಾಲಕ ರಮೇಶ್ ರಾವ್ ಅವರು ಹೆದ್ದಾರಿಯಲ್ಲಿ ಹಠಾತ್ ಆಗಿ ತಿರುವು ಪಡೆಯುತ್ತಿದ್ದ ಸಂದರ್ಭ ಕಾರು ಬೈಕಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಾಯಾಳುಗಳನ್ನು ಮಿದ್ಲಾಜ್ ಹಾಗೂ ಸಾಜೀದ್ ಎನ್ನಲಾಗಿದ್ದು, ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತದಿಂದ ಬೈಕ್ ಕೂಡಾ ಸಂಪೂರ್ಣ ಜಖಂಗೊಂಡಿದ್ದು, ಕಾರಿನ ಚಕ್ರಕ್ಕೂ ಹಾನಿಯಾಗಿದೆ.
ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ಸಂಚರಿಸಲು ಹೆದ್ದಾರಿಯಲ್ಲಿ ತಿರುವು ಪಡೆದು ವಾಹನ ಸವಾರರು ಸಂಚಾರ ಮಾಡುವುದರಿಂದ ಇಲ್ಲಿನ ಅಪಘಾತಗಳು ನಿತ್ಯ ಸಂಭವಿಸುತ್ತಿದ್ದು, ಇಲ್ಲಿನ ಹೆದ್ದಾರಿ ಡಿವೈಡರ್ ಬಂದ್ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

















0 comments:
Post a Comment