ಬಂಟ್ವಾಳ, ಅಕ್ಟೋಬರ್ 13, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಭಾ ವ್ಯಾಪ್ತಿಯ ಪಾಣೆಮಂಗಳೂರು ಗ್ರಾಮದ 24ನೇ ವಾರ್ಡಿನ ಬಂಗ್ಲೆಗುಡ್ಡೆ ಶ್ರೀ ಶಾರದಾ ಪ್ರೌಢಶಾಲೆ ಹಾಗೂ ಎಸ್ ಎಲ್ ಎನ್ ಪಿ ವಿದ್ಯಾಲಯದ ಬಳಿ ಮತ್ತೆ ತ್ಯಾಜ್ಯ ರಾಶಿ ಬಿದ್ದಿದ್ದು, ಬೀದಿ ನಾಯಿಗಳು, ಜಾನುವಾರುಗಳು ಎಲ್ಲೆಂದರಲ್ಲಿ ಎಳೆದಾಡುತ್ತಾ ಇಡೀ ಪರಿಸರ ದುರ್ನಾತ ಬೀರುತ್ತಿರುವ ಬಗ್ಗೆ ಸ್ಥಳೀಯರು ಹಾಗೂ ವಿದ್ಯಾರ್ಥಿ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿನಿಂದಲೂ ಇಲ್ಲಿನ ಪ್ರದೇಶ ತ್ಯಾಜ್ಯದಿಂದಲೇ ಕೂಡಿದ್ದು, ಇತ್ತೀಚೆಗಷ್ಟೆ ಪುರಸಭೆ ಹಾಗೂ ಶಾಲಾಡಳಿತ ಮಂಡಳಿ ಜಂಟಿಯಾಗಿ ಮೋರಿ ಅಳವಡಿಸಿ ಸಮತಟ್ಟುಗೊಳಿಸಲಾಗಿತ್ತು. ಇದು ತ್ಯಾಜ್ಯ ವಿಲೇವಾರಿಗೆ ಕ್ರಮ ಎಂದೇ ಭಾವಿಸಲಾಗಿತ್ತು. ಆದರೆ ಜನರ ತಿಳುವಳಿಕೆ ಸುಳ್ಳಾಗಿದ್ದು, ಪರಿಸರ ಮತ್ತೆ ತ್ಯಾಜ್ಯ ಯಥಾಸ್ಥಿತಿ ರಾಶಿ ಬಿದ್ದಿದೆ. ಇಲ್ಲಿನ ತ್ಯಾಜ್ಯದಿಂದಾಗಿ ಶಾಲಾ ಪರಿಸರದಲ್ಲಿ ಬೀದಿ ನಾಯಿಗಳ ಸಂಖ್ಯೆಯ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಜಾನುವಾರುಗಳು ಕೂಡಾ ಇಲ್ಲಿನ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಳೆದಾಡಿ ಪರಿಸರವನ್ನು ವಿಷಮಗೊಳಿಸುತ್ತಿದೆ.
ಇಲ್ಲಿನ ತ್ಯಾಜ್ಯ ಸಮಸ್ಯೆಗೆ ಇನ್ನಾದರೂ ಸಂಬಂಧಪಟ್ಟ ಪುರಸಭಾಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸಿ ಇಲ್ಲಿನ ಶಾಲಾ ವಠಾರವನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
















0 comments:
Post a Comment