ಬಂಟ್ವಾಳ, ಅಕ್ಟೋಬರ್ 05, 2025 (ಕರಾವಳಿ ಟೈಮ್ಸ್) : ಮೂಲವ್ಯಾಧಿ ಹಾಗೂ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಕಾಡು ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಂಕಕಜೆಕಾರು ಗ್ರಾಮದ ಕೊಂಬೆಟ್ಟು ಎಂಬಲ್ಲಿ ಅ 3 ರಂದು ಸಂಭವಿಸಿದೆ.
ಮೃತ ವ್ಯಕ್ತಿಯನ್ನು ತೆಂಕಕಜೆಕಾರು ಗ್ರಾಮದ ಕರ್ಲ ನಿವಾಸಿ ದಿನೇಶ (44) ಎಂದು ಹೆಸರಿಸಲಾಗಿದೆ. ಇವರು ಕಳೆದ 1 ವರ್ಷದಿಂದ ಮೂಲವ್ಯಾಧಿ ಕಾಯಿಲೆಯಿಂದ ಹಾಗೂ ಕಳೆದ 6 ತಿಂಗಳಿನಿಂದ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಬೇಸತ್ತುಕೊಂಡು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮೃತರ ಸಹೋದರ ದಯಾನಂದ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.













0 comments:
Post a Comment