ಬಂಟ್ವಾಳ, ಅಕ್ಟೋಬರ್ 05, 2025 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ ಬಡ್ಡಕಟ್ಟೆಯ ಬ್ರಹ್ಮಗುರು ಹೋಟೆಲಿನಲ್ಲಿ ಮದ್ಯ ಬಂದ್ ಆದೇಶ ಇದ್ದ ಸಂದರ್ಭ ಪರವಾನಿಗೆ ಇಲ್ಲದೆ ಅಧಿಕ ಬೆಲೆಗೆ ಮದ್ಯ ಮಾರಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಸಾವಿರಾರು ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ಅವರು ಅ 3 ರಂದು ಖಚಿತ ಮಾಹಿತಿ ಮೇರೆಗೆ ಬಂದ ದೂರಿನ ಹಿನ್ನಲೆಯಲ್ಲಿ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದುಕೊಂಡು ಬ್ರಹ್ಮಗುರು ಹೋಟೆಲ್ ಬೀಗ ತೆರವುಗೊಳಿಸಿ ಶೋಧನೆ ನಡೆಸಿದ್ದು ಈ ಸಂದರ್ಭ ಪರವಾನಿಗೆ ರಹಿತವಾಗಿ ಸಂಗ್ರಹಿಸಿಟ್ಟಿದ್ದ ಮದ್ಯಗಳು ದೊರೆತಿದೆ.
ಮದ್ಯದ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡದಂತೆ ನಿಷೇದ ಆದೇಶವನ್ನು ಹೊರಡಿಸಿದ್ದ ವೇಳೆ ಬಡ್ಡಕಟ್ಟೆಯ ಬ್ರಹ್ಮಗುರು ಹೋಟೆಲ್ ಮಾಲಿಕರು ಯಾವುದೇ ಪರಪರವಾನಿಗೆ ಇಲ್ಲದೇ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಅಕ್ರಮವಾಗಿ ಮದ್ಯವನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿದ್ದು ಒಟ್ಟು 43.110 ಲೀಟರ್ ಮತ್ತು ಮದ್ಯ ಮಾರಾಟ ಮಾಡಿ ಖಾಲಿಯಾಗಿರುವ ಖಾಕಿ ಬಣ್ಣದ ರಟ್ಟಿನ ಬಾಕ್ಸನ್ನು ಖಾಲಿ ಮದ್ಯದ ಸ್ಯಾಚೆಟ್ ಗಳನ್ನು, ಮದ್ಯ ಕುಡಿಯಲು ಉಪಯೋಗಿಸಿದ ಸ್ಟೀಲ್ ಗ್ರಾಸುಗಳನ್ನು ಮದ್ಯ ಮಾರಾಟ ಮಾಡಿ ಗಳಿಸಿದ ಒಟ್ಟು 35,200/- ರೂಪಾಯಿ ಹಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment