ಬಂಟ್ವಾಳ, ಅಕ್ಟೋಬರ್ 09, 2025 (ಕರಾವಳಿ ಟೈಮ್ಸ್) : ತೋಟಕ್ಕೆ ಹಾಕುವ ಸುಣ್ಣದ ಗೋಣಿಯನ್ನು ಹೊತ್ತುಕೊಂಡು ಬರುತ್ತಿದ್ದ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಬಡಗಕಜೆಕಾರು ಗ್ರಾಮದ ಕಜೆಕಾರು ಎಂಬಲ್ಲಿನ ತೋಟದಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಬಡಗಕಜೆಕಾರಿ ಗ್ರಾಮದ ಕಜೆಕಾರು ನಿವಾಸಿ ಜಯ ದೇವಾಡಿಗ ಎಂದು ಹೆಸರಿಸಲಾಗಿದೆ. ಈ ಬಗ್ಗೆ ತೋಟದ ಮೃತರ ಅಣ್ಣ ನಾರಾಯಣ ದೇವಾಡಿಗ (69) ಅವರು ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಇವರ ತಮ್ಮ ಜಯ ದೇವಾಡಿಗ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಸೆ 9 ರಂದು ಮನೆ ಸಮೀಪದ ನಿವಾಸಿ ಜಯ ದೇವ್ ಜೈನ್ ಎಂಬವರ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು, ಅಡಿಕೆ ತೋಟಕ್ಕೆ ಸುಣ್ಣವನ್ನು ಹಾಕುವ ಕೆಲಸದ ಸಮಯ ಬೆಳಿಗ್ಗೆ 9.45ಕ್ಕೆ ಜಯ ದೇವಾಡಿಗ ಭಾರದ ಸುಣ್ಣದ ಗೋಣಿ ಚೀಲವನ್ನು ತಲೆಯಲ್ಲಿ ಹೊತ್ತುಕೊಂಡು ತೋಟದಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಒಮ್ಮೆಲೆ ಕಾಲು ಜಾರಿ ಬಿದ್ದಿದ್ದು, ಈ ವೇಳೆ ಕುತ್ತಿಗೆಗೆ ಉಳುಕಿದ ಮೂಳೆ ಮುರಿತದ ಗಾಯ ಹಾಗೂ ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಕೈ ಕಾಲುಗಳಿಗೆ ಬಲವಿಲ್ಲದೇ ಅಲ್ಲೇ ಬಿದ್ದಿದ್ದವರನ್ನು ನಾರಾಯಣ ದೇವಾಡಿಗ ಹಾಗೂ ನಾರಾಯಣ ಎಂಬವರು ಸೇರಿ ಆಟೋ ರಿಕ್ಷಾದಲ್ಲಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಜಯ ದೇವಾಡಿಗ ಅವರು ಅಕ್ಟೋಬರ್ 7 ರಂದು ರಾತ್ರಿ 11.45 ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment