ಬಂಟ್ವಾಳ, ನವೆಂಬರ್ 11, 2025 (ಕರಾವಳಿ ಟೈಮ್ಸ್) : ಕ್ರೀಡಾ ವಿಭಾಗದಲ್ಲಿ ಬಂಟ್ವಾಳದ ಚಿನ್ನದ ಹುಡುಗಿ ಎಂದೇ ಪ್ರಸಿದ್ದಿ ಪಡೆದ ಭಾರತೀಯ ಅಥ್ಲೀಟ್ ಗ್ಲೇಡಿಸ್ ಪಾಯಸ್ ಅವರು ಚೆನ್ನೈಯಲ್ಲಿ ನಡೆದ 23ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ಪಿನಲ್ಲಿ 70ರ ವಯೋಮಾನದ ವಿಭಾಗದಲ್ಲಿ ನಾಲ್ಕು ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.
ಭಾರತವನ್ನು ಪ್ರತಿನಿಧಿಸಿ ಭಾಗವಹಿಸಿದ್ದ ಗ್ಲೇಡಿಸ್ ಪಾಯಸ್ ಅವರು 200 ಮೀಟರ್ ಹರ್ಡಲ್ಸ್ ನಲ್ಲಿ ಚಿನ್ನದ ಪದಕ, ಟ್ರಿಪಲ್ ಜಂಪ್ ನಲ್ಲಿ ಬೆಳ್ಳಿ ಪದಕ ಮತ್ತು 80 ಮೀ ಹರ್ಡಲ್ಸ್ ಮತ್ತು 200 ಮೀ ಓಟ ಎರಡರಲ್ಲೂ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇವರು ಬಂಟ್ವಾಳ ತಾಲೂಕು ಬಿ ಸಿ ರೋಡು ಸಮೀಪದ ಪಲ್ಲಮಜಲು ನಿವಾಸಿಯಾಗಿದ್ದಾರೆ.















0 comments:
Post a Comment