ಮಂಗಳೂರು, ನವೆಂಬರ್ 12, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಕುಲಾಲ ಸುಧಾರಕ ಸಂಘ ಹೊಸಳ್ಳಿ ಇದರ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ಅವರಿಗೆ ಮಂಗಳೂರಿನ ದಾಸ್ ಪೆÇ್ರಮೋಶನ್ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅನಿಲ್ ದಾಸ್ ಅವರು, ಬಂಟ್ವಾಳ ಕುಲಾಲ ಸುಧಾರಕ ಸಂಘ ನಮ್ಮ ಅಚ್ಚುಮೆಚ್ಚಿನ ಸಂಘವಾಗಿರುತ್ತದೆ. ಕುಲಾಲ ಸಮಾಜದಲ್ಲಿ ತುಂಬಾ ಸಾಧಕರಿರುತ್ತಾರೆ. ಸಾಧಕರಿಗೆ ಕುಲಾಲ ಸಮಾಜದ ಸಂಘಗಳು ಉತ್ತಮ ಪೆÇ್ರೀತ್ಸಾಹ ನೀಡುತ್ತಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು, ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ನಿಕಟ ಪೂರ್ವಾಧ್ಯಕ್ಷರಾದ ಮಚೇಂದ್ರನಾಥ ಸಾಲಿಯಾನ್, ರಾಧಾಕೃಷ್ಣ ಬಂಟ್ವಾಳ, ಜತೆ ಕಾರ್ಯದರ್ಶಿಗಳಾದ ಸತೀಶ್ ಸಂಪಾಜೆ, ಮೀನಾಕ್ಷಿ ಪದ್ಮನಾಭ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಮಾಧವ ಬಿ ಸಿ ರೋಡ್ , ಜಯಂತ್ ಬಂಗೇರ ವಗ್ಗ, ಪ್ರೇಮ ಜನಾರ್ಧನ ಪೆÇಸಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಗಿರಿಧರ್ ಮೊದಲಾದವರು ಭಾಗವಹಿಸಿದ್ದರು.
















0 comments:
Post a Comment