ಬಂಟ್ವಾಳ, ನವೆಂಬರ್ 27, 2025 (ಕರಾವಳಿ ಟೈಮ್ಸ್) : ದ ಕ ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಬಂಟ್ವಾಳ ಹಾಗೂ ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ 2025-2026ನೇ ಸಾಲಿನ ಕಿರಿಯ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ರಾಯಿ ಕ್ಲಸ್ಟರ್ ಮಟ್ಟವನ್ನು ಪ್ರತಿನಿಧಿಸಿದ ಬಂಟ್ವಾಳ ವಿದ್ಯಾನಿಕೇತನ ವಿದ್ಯಾಲಯದ 1ನೇ ತರಗತಿ ವಿದ್ಯಾರ್ಥಿ ಆರ್ ಜೆ ಸಾಮ್ರಾಟ್ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಈತ ರಾಯಿ ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ನವೆಂಬರ್ 27 ರಂದು ಬಂಟ್ವಾಳ ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಈತ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಉದ್ಯೋಗಿ ರಾಜೀವ್ ಕಕ್ಕೆಪದವು ಹಾಗೂ ಜಲಜಾಕ್ಷಿ ದಂಪತಿಯ ಪುತ್ರನಾಗಿದ್ದಾನೆ. ಸ್ಪರ್ಧೆಯಲ್ಲಿ ಒಟ್ಟು 25 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಈತನ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕಿಯರಾದ ಹೇಮಲತಾ ಹಾಗೂ ಸವಿತಾ ಮೇಡಂ ಹಾಗೂ ಶಿಕ್ಷಕ ವೃಂದ ಸಹಕರಿಸಿದ್ದಾರೆ.
























0 comments:
Post a Comment