ಮಂಗಳೂರು, ನವೆಂಬರ್ 28, 2025 (ಕರಾವಳಿ ಟೈಮ್ಸ್) : ಪಣಂಬೂರು ಬೀಚಿಗೆ ತೆರಳಿದ್ದ ವೇಳೆ ಬ್ಯಾಗಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ಕಳವಾದ ಪ್ರಕರಣವನ್ನು ಎರಡೇ ದಿನದಲ್ಲಿ ಬೇಧಿಸಿದ ಪೊಲೀಸರು ಅಪ್ರಾಪ್ತ ಬಾಲಕನನ್ನು ಪತ್ತೆ ಹಚ್ಚಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನವೆಂಬರ್ 24 ರಂದು ಬೆಳಿಗ್ಗೆ ಸ್ವಾತಿ ನಂದಿಪಳ್ಳಿ (24) ಅವರು ತನ್ನ ಸ್ನೇಹಿತ ರೋಹಿತ್ ವೆಮ್ಮಲೆಟ್ಟಿ ಎಂಬವರೊಂದಿಗೆ ಪಣಂಬೂರು ಬೀಚಿಗೆ ಬಂದವರು ತನ್ನ ಚಿನ್ನದ 12 ಗ್ರಾಂ ತೂಕದ ಚೈನ್, 2 ಗ್ರಾಂ ತೂಕದ ಲಾಕೆಟ್, ತಲಾ 2 ಗ್ರಾಂ ತೂಕದ ಎರಡು ಉಂಗುರ ಮತ್ತು 4 ಗ್ರಾಂ ತೂಕದ ಕಿವಿ ಓಲೆ ಹಾಗೂ ಅವರ ರಿಯಲ್ ಮಿ ಕಂಪೆನಿಯ ಮೊಬೈಲ್ ಪೆÇೀನ್, ಸ್ನೇಹಿತ ರೋಹಿತ್ ವೆಮ್ಮಲೆಟ್ಟಿ ಅವರ ಸ್ಯಾಮ್ ಸಂಗ್ ಎಸ್ 24 ಕಂಪೆನಿಯ ಮೊಬೈಲ್ ಪೆÇೀನ್ ಗಳನ್ನು ಕಪ್ಪು ಬಣ್ಣದ ಬ್ಯಾಗಿನಲ್ಲಿ ಹಾಕಿ ಸಮುದ್ರ ದಡದಲ್ಲಿ ಇರಿಸಿ, ನೀರಿನಲ್ಲಿ ಈಜಾಡಲು ಸಮುದ್ರಕ್ಕೆ ಇಳಿದಿದ್ದರು. ಬಳಿಕ 11.50 ರ ವೇಳೆಗೆ ವಾಪಾಸು ಬಂದು ನೋಡಿದಾಗ ಬ್ಯಾಗ್ ಕಳವಾಗಿತ್ತು. ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು 3.33 ಲಕ್ಷ ರೂಪಾಯಿಗಳು ಆಗಿದೆ. ಈ ಬಗ್ಗೆ ಪಣಂಬೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನವೆಂಬರ್ 26 ರಂದು ಎರಡೇ ದಿನದಲ್ಲಿ ಪ್ರಕರಣ ಪತ್ತೆ ಹಚ್ಚಿರುವ ಪಣಂಬೂರು ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನ ಕಡೆಯಿಂದ ಕಳವಾದ 3.33 ಲಕ್ಷ ಮೌಲ್ಯದ ಎಲ್ಲಾ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣವನ್ನು ತ್ವರಿತವಾಗಿ ಭೇದಿಸುವಲ್ಲಿ ಮಂಗಳೂರು ನಗರ ಉಪ ಪೆÇಲೀಸ್ ಆಯುಕ್ತ ಕೆ. ರವಿಶಂಕರ್ (ಅಪರಾಧ ಮತ್ತು ಸಂಚಾರ ವಿಭಾಗ) ಮತ್ತು ಉತ್ತರ ವಿಭಾಗದ ಸಹಾಯಕ ಪೆÇಲೀಸ್ ಆಯುಕ್ತ ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಪಣಂಬೂರು ಪೆÇಲೀಸ್ ಠಾಣೆಯ ಪ್ರಭಾರದಲ್ಲಿರುವ ಪೆÇಲೀಸ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್, ಪಿಎಸ್ಸೈಗಳಾದ ಜ್ಷಾನಶೇಖರ, ಶ್ರೀಕಲಾ ಹಾಗೂ ಸಿಬ್ಬಂದಿಗಳಾದ ಸಯ್ಯದ್ ಇಂತಿಯಾಝ್, ರಾಕೇಶ್ ಹಾಗೂ ಶರಣ ಬಸವ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.














0 comments:
Post a Comment