ಬಂಟ್ವಾಳ, ನವೆಂಬರ್ 06, 2025 (ಕರಾವಳಿ ಟೈಮ್ಸ್) : ಬಸ್ಸು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯಗೊಂಡ ಘಟನೆ ಬಿ ಸಿ ರೋಡಿನಲ್ಲಿ ನ 4 ರಂದು ಸಂಜೆ ಸಂಭವಿಸಿದೆ. ಗಾಯಾಳು ಸ್ಕೂಟರ್ ಸವಾರನನ್ನು ಮೂಲತಃ ಹಾವೇರಿ ಮೂಲದ, ಪ್ರಸ್ತುತ ಬಿ ಮೂಡ ಗ್ರಾಮದ ಮಯ್ಯರಬೈಲು ಎಂಬಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ರಮೇಶ ಮಲ್ಲಪ್ಪ ಲಮಾಣಿ (33) ಎಂದು ಹೆಸರಿಸಲಾಗಿದೆ.
ಇವರು ನ 4 ರಂದು ಮಂಗಳೂರಿನ ಬಜ್ಪೆ ಕಡೆಯಿಂದ ಕೂಲಿ ಕೆಲಸ ಮುಗಿಸಿಕೊಂಡು ಬಾಡಿಗೆ ಮನೆಯಾದ ಬಿ ಸಿ ರೋಡ್ ಕಡೆಗೆ ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ಬಿ ಸಿ ರೋಡು ಕಡೆಯಿಂದ ಪೆÇಳಲಿ ಕಡೆಗೆ ಗೋಪಾಲ ಪೂಜಾರಿ ಎಂಬವರ ಚಲಾಯಿಸಿಕೊಂಡು ಬರುತ್ತಿದ್ದ ಬಸ್ಸು ಎದುರಿನಿಂದ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ರಮೇಶ ಮಲ್ಲಪ್ಪ ಲಮಾಣಿ ಅವರು ಗಾಯಗೊಂಡಿದ್ದು, ಅವರನ್ನು ಬಸ್ಸಿನಲ್ಲಿದ್ದ ಸಾರ್ವಜನಿಕರು ಹಾಗೂ ಬಸ್ ನಿರ್ವಾಹಕ ಅವರು ತುಂಬೆ ಫಾದರ್ ಮುಲ್ಲರ್ ಆಸ್ಪತೆಗೆ ಸಾಗಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಡ್ಯಾರ್ ಜನಪ್ರಿಯಾ ಅಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment