ಬಂಟ್ವಾಳ, ನವೆಂಬರ್ 06, 2025 (ಕರಾವಳಿ ಟೈಮ್ಸ್) : ಹೊಸ ಮನೆ ನಿರ್ಮಾಣದ ಸ್ಥಳದಲ್ಲಿ ತಂದು ಹಾಕಿದ್ದ ಕಬ್ಬಿಣದ ಸೆಂಟ್ರಿಂಗ್ ಶೀಟುಗಳು ಕಳವುಗೈದ ಘಟನೆ ನಾವೂರು ಗ್ರಾಮದ ಸುಲ್ತಾನ್ ನಗರ ಎಂಬಲ್ಲಿ ಅ 10 ರಂದು ಬೆಳಕಿಗೆ ಬಂದಿದೆ.
ನಾವೂರು ಗ್ರಾಮದ ಸುಲ್ತಾನ್ ನಗರ ನಿವಾಸಿ ಜಲೀಲ್ (41) ಅವರು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ನಾವೂರು ಗ್ರಾಮದ ಸುಲ್ತಾನ್ ನಗರ ಎಂಬಲ್ಲಿ ಹೊಸ ಮನೆಯ ಕೆಲಸದ ಬಗ್ಗೆ 115 ಕಬ್ಬಿಣದ ಸೆಂಟ್ರಿಂಗ್ ಶೀಟುಗಳನ್ನು ತಂದು ನಿರ್ಮಾಣ ಹಂತದ ಮನೆಯ ಬಳಿ ಹಾಕಿದ್ದು. ಅ 9 ರಂದು ಮನೆ ಕೆಲಸ ನಡೆದಿದ್ದು ಆ ದಿನ ಸಂಜೆ 7 ಗಂಟೆಗೆ ಮನೆ ಕೆಲಸದ ವೀಕ್ಷಣೆ ಬಗ್ಗೆ ಇವರು ಹೋದಾಗ ಕಬ್ಬಿಣದ ಸೆಂಟ್ರಿಂಗ್ ಶೀಟುಗಳು ಅಲ್ಲೆ ಇತ್ತು. ಮರುದಿನ ಅಂದರೆ ಅ 10 ರಂದು ಬೆಳಿಗ್ಗೆ 8 ಗಂಟೆಗೆ ಕೆಲಸದವರನ್ನು ಕೆಲಸಕ್ಕೆ ನೇಮಿಸುವ ಬಗ್ಗೆ ಮನೆ ಬಳಿ ಹೋದಾಗ ಸೆಂಟ್ರಿಂಗ್ ಕೆಲಸದ ಬಗ್ಗೆ ತಂದು ಹಾಕಿದ್ದ 115 ಕಬ್ಬಿಣದ ಸೆಂಟ್ರಿಂಗ್ ಶೀಟುಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾಗಿರುವ ಕಬ್ಬಿಣದ ಸೆಂಟ್ರಿಂಗ್ ಶೀಟುಗಳ ಮೌಲ್ಯ 70 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.















0 comments:
Post a Comment