ಸಮಾಜಕ್ಕೆ ಒಳಿತಾಗುವ ಕಾರ್ಯಕ್ಕೆ ಮುಂದಾದರೆ ನಾಗರಿಕ ಸಮಾಜವೇ ಕೈಹಿಡಿದು ಮುನ್ನಡೆಸಲಿದೆ : ಅಶೋಕ್ ಶೆಟ್ಟಿ ಸರಪಾಡಿ - Karavali Times ಸಮಾಜಕ್ಕೆ ಒಳಿತಾಗುವ ಕಾರ್ಯಕ್ಕೆ ಮುಂದಾದರೆ ನಾಗರಿಕ ಸಮಾಜವೇ ಕೈಹಿಡಿದು ಮುನ್ನಡೆಸಲಿದೆ : ಅಶೋಕ್ ಶೆಟ್ಟಿ ಸರಪಾಡಿ - Karavali Times

728x90

21 November 2025

ಸಮಾಜಕ್ಕೆ ಒಳಿತಾಗುವ ಕಾರ್ಯಕ್ಕೆ ಮುಂದಾದರೆ ನಾಗರಿಕ ಸಮಾಜವೇ ಕೈಹಿಡಿದು ಮುನ್ನಡೆಸಲಿದೆ : ಅಶೋಕ್ ಶೆಟ್ಟಿ ಸರಪಾಡಿ

ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಒಂದು ತಿಂಗಳ “ಬಂಟ್ವಾಳ ಉತ್ಸವ”ಕ್ಕೆ ಚಾಲನೆ


ಬಂಟ್ವಾಳ, ನವೆಂಬರ್ 22, 2025 (ಕರಾವಳಿ ಟೈಮ್ಸ್) : ಸಮಾಜಕ್ಕೆ ಒಳಿತಾಗುವ ಕಾರ್ಯಕ್ರಮ ನಡೆಸಲು ಮುಂದಾದಾಗ ನಾಗರಿಕ ಸಮಾಜವೇ ಕೈ ಹಿಡಿದು ಮುನ್ನಡೆಸುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಹೇಳಿದರು. 

ಬಿ ಸಿ ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಬಂಟ್ವಾಳ ಫೆಸ್ಟ್ ಇದರ ವತಿಯಿಂದ ಒಂದು ತಿಂಗಳ ಕಾಲ ನಡೆಯುವ ಬೃಹತ್ ಗ್ರಾಹಕರ ಮೇಳ, ಅಮ್ಯೂಸ್ ಮೆಂಟ್ ಪಾರ್ಕ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನ “ಬಂಟ್ವಾಳ ಉತ್ಸವ” ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲೆ, ಸಂಸ್ಕøತಿಯ ಬೆಳವಣಿಗೆಗೆ ಯಾರು ಪ್ರಯತ್ನಿಸಿದರೂ ಅದಕ್ಕೆ ಸದಾ ಬೆಂಬಲ ಇದ್ದೇ ಇದೆ. ಪ್ರತೀ ಕ್ಷೇತ್ರದಲ್ಲೂ ಸ್ಪರ್ಧೆ ಸಹಜವಾಗಿದ್ದು, ಸ್ಪರ್ಧೆ ಏರ್ಪಟ್ಟಾಗ ಅದರ ಅಂತಿಮ ಲಾಭ ನಾಗರಿಕ ಸಮಾಜಕ್ಕೆ ದೊರೆಯುತ್ತದೆ ಎಂದರು. 

ಸಾಹಿತ್ಯ, ಕಲೆ, ರಾಜಕೀಯ, ಸಂಸ್ಕøತಿ ಸಹಿತ ಎಲ್ಲಾ ರಂಗದಲ್ಲು ಮುಂಚೂಣಿಯಲ್ಲಿರುವ ಬಂಟ್ವಾಳ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೇ ಮಾದರಿ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ರಾಜಕೀಯ ರಹಿತವಾಗಿ ನಡೆದಾಗ ಅದು ಸಮಾಜದ ಸ್ವಾಸ್ಥ್ಯಕ್ಕೂ ಪೂರಕ ಎಂದರು. 

ಉತ್ಸವ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ಉತ್ಸವದ ಹೆಸರಿನಲ್ಲಿ ಬಿ ಸಿ ರೋಡು ಜಂಕ್ಷನ್ನಿನಲ್ಲಿ ನಡೆಯುವ ಈ ಒಂದು ಕಾರ್ಯಕ್ರಮದಿಂದಾಗಿ ಪರಿಸರದ ಜನರಿಗೆ ಒಂದು ತಿಂಗಳ ಕಾಲ ಹಬ್ಬದ ವಾತಾವರಣ ಸೃಷ್ಟಿಸಲಿದ್ದು, ಇದು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. 

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಮಾತನಾಡಿ, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳ ನಡುವೆ ಸಾಂಸ್ಕøತಿಕ, ಮನೋರಂಜನಾ ಕಾರ್ಯಕ್ರಮಗಳೂ ನಡೆದಾಗ ಸಮಾಜ ಸೌಹಾರ್ದತೆಯತ್ತ ಮುನ್ನಡೆಯಲಿದೆ ಎಂದರು. 

ಬಂಟ್ವಾಳ ಕಂಬಳೋತ್ಸವ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಜಿ ಪಂ ನಿಕಟಪೂರ್ವ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾ ಉಪಾಧ್ಯಕ್ಷ ಮೂನಿಶ್ ಅಲಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ತುಳು ಕೂಟದ ಅಧ್ಯಕ್ಷ ಸುದರ್ಶನ್ ಜೈನ್, ಗಾಣಿಗ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ, ನ್ಯಾಯವಾದಿ ಉಮೇಶ್ ಕುಮಾರ್ ವೈ, ಉದ್ಯಮಿ ಹಂಝ ಬಸ್ತಿಕೋಡಿ, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಪುರಸಭಾ ನಾಮನಿರ್ದೇಶಿತ ಸದಸ್ಯ ಜಗದೀಶ್ ಕುಂದರ್ ಭಂಡಾರಿಬೆಟ್ಟು, ಶಿಕ್ಷಕಿ ಜ್ಯೋತಿ ಮಾರ್ಟಿನ್ ಮೊದಲಾದವರು ಭಾಗವಹಿಸಿದ್ದರು. 

ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಸಂಜೆ ವೇಳೆ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಇದೇ ವೇಳೆ ಐವರು ಅಶಕ್ತರಿಗೆ ಸಹಾಯಧನ ವಿತರಿಸಲಾಯಿತು. ಉತ್ಸವ ವ್ಯವಸ್ಥಾಪಕರಾದ  ಮಹಮ್ಮದ್ ನಂದಾವರ, ನವೀನ್ ಕುಮಾರ್, ಶಿವಪ್ರಸಾದ್ ಬಂಟ್ವಾಳ, ವಿಶ್ವನಾಥ ಕೊಟ್ಟಾರಿ ಸಜಿಪ, ಇಂಡಿಯನ್ ಅಮ್ಯೂಸ್ ಮೆಂಟ್ ಇದರ ನಾಸಿರ್ ಕಾವಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಸೌಮ್ಯ ಯಶವಂತ ಭಂಡಾರಬೆಟ್ಟು ಸ್ವಾಗತಿಸಿ, ಇಬ್ರಾಹಿಂ ಕೈಲಾರ್ ವಂದಿಸಿದರು. ಶ್ರೀಶ ವಾಸವಿ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಸಮಾಜಕ್ಕೆ ಒಳಿತಾಗುವ ಕಾರ್ಯಕ್ಕೆ ಮುಂದಾದರೆ ನಾಗರಿಕ ಸಮಾಜವೇ ಕೈಹಿಡಿದು ಮುನ್ನಡೆಸಲಿದೆ : ಅಶೋಕ್ ಶೆಟ್ಟಿ ಸರಪಾಡಿ Rating: 5 Reviewed By: karavali Times
Scroll to Top