ಬಂಟ್ವಾಳ, ನವೆಂಬರ್ 22, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಮುಖ ಪೇಟೆಯಾಗಿರುವ ಪಾಣೆಮಂಗಳೂರು ಪೇಟೆಯಲ್ಲಿ ಬಹುಪಯೋಗಿಯಾಗಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದರೂ ಇನ್ನೂ ಉದ್ಘಾಟನಾ ಭಾಗ್ಯ ಒದಗಿ ಬಂದಿಲ್ಲ.
ಪುರಸಭಾ ನಿಧಿಯಿಂದ ಸುಸಜ್ಜಿತವಾಗಿ ಪಾಣೆಮಂಗಳೂರು ಪೇಟೆಯಲ್ಲಿ ಈ ಶೌಚಾಲಯ ನಿರ್ಮಾಣಗೊಂಡಿದ್ದು, ಎಲ್ಲ ಕಾಮಗಾರಿಗಳು ಪರಿಪೂರ್ಣವಾಗಿ ಪೂರ್ಣಗೊಂಡು ತಿಂಗಳುಗಳೇ ಕಳೆದಿವೆ. ಇದರ ಉದ್ಘಾಟನೆ ಬಗ್ಗೆ ಪುರಸಭಾಡಳಿತ ಹಾಗೂ ಅಧಿಕಾರಿಗಳು ಹೇಳಿಕೆಗಳನ್ನು ನೀಡಲು ಸೀಮಿತಗೊಂಡಿದ್ದಾರಾದರೂ ಶೌಚಾಲಯದ ಉದ್ಘಾಟನೆ ಇನ್ನೂ ನೆರವೇರಿಲ್ಲ. ಜನರ ತೆರಿಗೆ ಹಣ ಬಳಸಿ ವ್ಯವಸ್ಥೆಯೇನೋ ನಿರ್ಮಾಣವಾಗಿದ್ದರೂ ಜನರ ಉಪಯೋಗಕ್ಕೆ ಮಾತ್ರ ಅದು ಒದಗಿ ಬರದ ಬಗ್ಗೆ ಪುರವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ಪುರಸಭೆಯ ಎರಡನೇ ಅವಧಿಯ ಆಡಳಿತ ಅವಧಿ ಮುಕ್ತಾಯಗೊಂಡರೂ ಪ್ರಸ್ತುತ ಅವಧಿಯಲ್ಲಿ ನಿರ್ಮಾಣಗೊಂಡು ಕಾಮಗಾರಿ ಪೂರ್ಣಗೊಂಡ ಶೌಚಾಲಯ ಮಾತ್ರ ಇನ್ನೂ ಉದ್ಘಾಟನೆ ಭಾಗ್ಯ ಕಾಣದೆ ಜನರಿಗೆ ಉಪಯೋಗಕ್ಕೆ ಬರುವುದರಿಂದ ವಂಚಿತವಾಗಿದೆ ಎಂಬುದೇ ವಿಪರ್ಯಾಸ.
















0 comments:
Post a Comment