ಬಂಟ್ವಾಳ, ನವೆಂಬರ್ 27, 2025 (ಕರಾವಳಿ ಟೈಮ್ಸ್) : ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಗಂಭೀರ ಗಾಯಗೊಂಡ ಘಟನೆ ವೀರಕಂಭ ಎಂಬಲ್ಲಿ ನ 25 ರಂದು ಸಂಭವಿಸಿದೆ.
ಗಾಯಾಳು ಬೈಕ್ ಸವಾರನನ್ನು ಉಮೇಶ್ ಎಂದು ಹೆಸರಿಸಲಾಗಿದೆ. ಈತ ವೀರಕಂಭ ಕಡೆಯಿಂದ ಬೋಳಂತೂರು ಕಡೆಗೆ ಹೋಗುತ್ತಿದ್ದ ವೇಳೆ ವೀರಕಂಭ ಎಂಬಲ್ಲಿ ನಾಯಿಯೊಂದು ಅಡ್ಡ ಬಂದಾಗ ಚಾಲಕನ ನಿಯಂತ್ರಣ ಮೀರಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ಪರಿಣಾಮ ಸವಾರ ಉಮೇಶ್ ಅವರ ತಲೆ ಹಾಗೂ ಮೈಕೈಗೆ ಗಾಯಗಳಾಗಿವೆ. ಅಪಘಾತದಿಂದ ಪ್ರಜ್ಞಾಹೀನರಾಗಿ ಬಿದ್ದಿದ್ದ ಉಮೇಶ್ ಅವರನ್ನು ಪರಿಚಯದ ಶರತ್ ಅವರು ಉಪಚರಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಬೋಳಂತೂರು ನಿವಾಸಿ ಹರೀಶ್ ನಾಯ್ಕ ಎಂಬವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment