ಬಂಟ್ವಾಳ, ನವೆಂಬರ್ 27, 2025 (ಕರಾವಳಿ ಟೈಮ್ಸ್) : ಎಟಿಎಂ ಯಂತ್ರದಲ್ಲಿ ಹಣ ಡ್ರಾ ಮಾಡಲು ತೆರಳಿದ್ದ ವೇಳೆ ಅಲ್ಲಿದ್ದ ಅಪರಿಚಿತರು ಎಟಿಎಂ ಕಾರ್ಡ್ ಬದಲಾಗಿದೆ ಎಂದು ಹೇಳಿ ಕಾರ್ಡ್ ಪಡೆದುಕೊಂಡು ಅದರಿಂದ ಲಕ್ಷಾಂತರ ರೂಪಾಯಿ ಹಣ ಡ್ರಾ ಮಾಡಿ ವಂಚಿಸಿದ ಘಟನೆ ವಿಟ್ಲ ಕಸಬಾ ಗ್ರಾಮದಲ್ಲಿ ನ 23 ರಂದು ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮೂಲತಃ ಬೆಳ್ತಂಗಡಿ ತಾಲೂಕು, ಮುಂಡಾಜೆ ಗ್ರಾಮದ ಕುಳೂರು ನಿವಾಸಿ, ಪ್ರಸ್ತುತ ಇಡ್ಕಿದು ಗ್ರಾಮದ ಉರಿಮಜಲು ಎಂಬಲ್ಲಿ ಸುಬ್ರಾಯ ಪೈ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿರುವ ದಾಮೋದರ ಪೂಜಾರಿ (48) ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಇವರ ಪತ್ನಿ ಗೀತಾ ಅವರು ಕೆನರಾ ಬ್ಯಾಂಕಿನಲ್ಲಿ 01412200064789 ಸಂಖ್ಯೆಯ ಖಾತೆ ಹೊಂದಿದ್ದು, ಅದೇ ನಂಬರಿನ ಅಕೌಂಟ್ ಬುಕ್ ಹೊಂದಿದ್ದಾರೆ. ಗೀತಾ ಅವರಿಗೆ ಅನಾರೋಗ್ಯದ ಹಿನ್ನಲೆಯಲ್ಲಿ ದಾಮೋದರ ಅವರು ಎಟಿಎಂ ಮೂಲಕ ಹಣ ಡ್ರಾ ಮಾಡುವರೇ ನ 23 ರಂದು ವಿಟ್ಲ ಕಸಬಾ ಗ್ರಾಮದ ಫಾತಿಮ ಕಟ್ಟಡದಲ್ಲಿರುವ ಎಟಿಎಂ ಯಂತ್ರದ ಹತ್ತಿರ ಹೋದಾಗ ಆ ಎಟಿಎಂ ಒಳಗಡೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಇದ್ದರು. ಸುಮಾರು 11.45 ರ ವೇಳೆ ಎಟಿಎಂ ರೂಮಿನ ಒಳಗೆ ಹೋಗಿ 6 ಸಾವಿರ ರೂಪಾಯಿ ಹಣ ಡ್ರಾ ಮಾಡಿ ವಾಪಾಸ್ಸು ಹೊರಗಡೆ ಬಂದಾಗ ಎಟಿಎಂ ಒಳಗಿದ್ದ ಆ ಇಬ್ಬರು ಅಪರಿಚಿತ ವ್ಯಕ್ತಿಗಳು ದಾಮೋದರ ಅವರನ್ನು ಕರೆದು ಹಿಂದಿ ಭಾಷೆಯಲ್ಲಿ ಎಟಿಎಂ ಸರಿಯಾಗಿ ಮುಚ್ಚುವಂತೆ ತಿಳಿಸಿದ್ದಾರೆ. ಅದರಂತೆ ದಾಮೋದರ್ ಅವರು ಎಟಿಎಂ ರೂಮಿನ ಒಳಗೆ ಹೋಗಿ ನೋಡಿ ಹೊರಗಡೆ ಬರುವಾಗ ಅದೇ ಅಪರಿಚಿತ ವ್ಯಕ್ತಿಗಳು ಎಟಿಎಂ ಕಾರ್ಡ್ ಅದಲು ಬದಲಾಗಿದೆ ಎಂದು ತಿಳಿಸಿ ಅವರ ಕೈಯಲ್ಲಿದ್ದ ಎಟಿಎಂ ಕಾರ್ಡನ್ನು ದಾಮೋದರ್ ಅವರಿಗೆ ನೀಡಿ ದಾಮೋದರ್ ಅವರ ಕೈಯಲ್ಲಿದ್ದ ಎಟಿಂಎ ಕಾರ್ಡನ್ನು ಅವರು ಪಡೆದುಕೊಂಡಿದ್ದಾರೆ. ನಂತರ ದಾಮೋದರ್ ಅವರು ಮನೆಗೆ ಬಂದು ರಾತ್ರಿ ಸಮಯ ಮೊಬೈಲ್ ನೋಡುವಾಗ ಹೆಂಡತಿಯ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 1.19 ಲಕ್ಷ ರೂಪಾಯಿ ಡ್ರಾ ಆಗಿರುವ ಬಗ್ಗೆ ಸಂದೇಶ ಬಂದಿರುತ್ತದೆ ಎಂದು ನೀಡಿರುವ ದೂರಿನಂತೆ ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment