ಬಂಟ್ವಾಳ, ನವೆಂಬರ್ 12, 2025 (ಕರಾವಳಿ ಟೈಮ್ಸ್) : ಹೆದ್ದಾರಿ ಡಿವೈಡರ್ ತೆರೆದ ಸ್ಥಳದಲ್ಲಿ ಯು ಟರ್ನ್ ಮಾಡುತ್ತಿದ್ದ ಬೈಕಿಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ನ 9 ರಂದು ಸಂಭವಿಸಿದೆ.
ಗಾಯಗೊಂಡ ಬೈಕ್ ಸವಾರರನ್ನು ನಾವೂರು ಗ್ರಾಮದ ಅಗ್ರಹಾರ ಮಠ ನಿವಾಸಿ ಕೃಷ್ಣ ಆಚಾರ್ಯ (68) ಹಾಗೂ ಸಹಸವಾರ ಚಂದ್ರಶೇಖರ್ ಎಂದು ಹೆಸರಿಸಲಾಗಿದೆ. ಕೃಷ್ಣ ಆಚಾರ್ಯ ಅವರು ಬೈಕಿನಲ್ಲಿ ಚಂದ್ರಶೇಖರ ಅವರನ್ನು ಕುಳ್ಳಿರಿಸಿಕೊಂಡು ಫರಂಗಿಪೇಟೆ ಬಂಗ್ಲಗುಡ್ಡ ಕಡೆಯಿಂದ ಒಳ ರಸ್ತೆಯ ಮೂಲಕ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಹೆದ್ದಾರಿ ರಸ್ತೆಯನ್ನು ತಲುಪಿ ಸ್ವಲ್ಪ ಮುಂದಕ್ಕೆ ಮಂಗಳೂರು ಕಡೆಗೆ ಸಾಗಿ ಡಿವೈಡರ್ ತೆರದ ಸ್ಥಳದಲ್ಲಿ ಯು ಟರ್ನ್ ಮಾಡುವರೇ ಸೂಚನೆ ನೀಡಿ ಬಲಭಾಗಕ್ಕೆ ಬೈಕನ್ನು ಸವಾರಿ ಮಾಡುತ್ತಿರುವಾಗ ಮಧ್ಯಾಹ್ನ 1 ಗಂಟೆಗೆ ಬಿ ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಮೊಹಮ್ಮದ್ ಆರೀಫ್ ಎಂಬಾತ ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಬೈಕ್ ಸಮೇತ ಸವಾರರು ರಸ್ತೆಗೆ ಬಿದ್ದು ಇಬ್ಬರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment