ಮಂಗಳೂರು, ನವೆಂಬರ್ 12, 2025 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಫ ಇದರ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದ ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಪರವಾಗಿ ಅಧ್ಯಕ್ಷ ಮಯೂರ್ ಉಳ್ಳಾಲ್ ಅವರನ್ನು ಜಿಲ್ಲಾ ಮಾತೃ ಸಂಘದಲ್ಲಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ಸುಮಾರು 98 ವರ್ಷಗಳಿಂದ ನಿರಂತರವಾಗಿ ಸಮಾಜಕ್ಕೆ ನೀಡುತ್ತಿರುವ ಸೇವೆಯನ್ನು ಪರಿಗಣಿಸಿ 2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ದ.ಕ. ಜಿಲ್ಲಾ ಮೂಲ್ಯರ ಯಾನೆ ಮಾತೃ ಸಂಘಕ್ಕೆ ಲಭಿಸಿದೆ. ಈಗಿರುವ ಈ ತಂಡಕ್ಕೆ ಮುಂದೆ ಇನ್ನಷ್ಟು ಮುಂದಿನ ಕೆಲಸ ಮಾಡಲು ಈ ಪ್ರಶಸ್ತಿ ಸ್ಪೂರ್ತಿಯಾಗಿರುತ್ತದೆ. ಈ ತಂಡದಲ್ಲಿ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಕೆಲಸ ನಡೆಯುತ್ತಿದೆ. ಕುಲಶೇಖರ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಅದ್ದೂರಿಯಾಗಿ ನಡೆಯಿತೋ ಅಲ್ಲಿಂದೇ ಸಮಾಜದ ಸೇವೆಗೊಂದು ಸ್ಪೂರ್ತಿಯಾಗಿರುತ್ತದೆ. ಅಷ್ಟೇ ಅಲ್ಲದೇ ಮಾತೃ ಸಂಘಕ್ಕೆ ಶತಮಾನೋತ್ಸವದ ಸಂದರ್ಭ ಗ್ರಾಮೀಣ ಭಾಗದಲ್ಲಿರುವ ಸಮಾಜ ಬಾಂಧವರಿಗೆ ಹಾಸ್ಟೆಲ್ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡುವ ಸಂಕಲ್ಪ ಮಾಡಿರುತ್ತೇವೆ ಎಂದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಜಲಜಾಕ್ಷಿ ಕುಲಾಲ್ ಪಿ, ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಅಗ್ರಬೈಲ್, ಕೋಶಾಧಿಕಾರಿ ಸೋಮನಾಥ್ ಸಾಲಿಯಾನ್, ಮಾಜಿ ಅಧ್ಯಕ್ಷರಾದ ಮಚೆಂದ್ರ ಸಾಲಿಯಾನ್, ರಾಧಾಕೃಷ್ಣ ಬಂಟ್ವಾಳ್, ಜೊತೆ ಕಾರ್ಯದರ್ಶಿಗಳಾದ ಮೀನಾಕ್ಷಿ ಪದ್ಮನಾಭ, ಸತೀಶ್ ಸಂಪಾಜೆ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಆಶಾ ಗಿರಿಧರ್, ಸದಸ್ಯರುಗಳಾದ ಪ್ರೇಮಾ ಜನಾರ್ಧನ್ ಪೆÇಸಳ್ಳಿ, ಯೋಗೀಶ್ ಬಂಗೇರ, ಮಾಧವ ಕುಲಾಲ್, ಜಯಂತ್ ವಗ್ಗ, ಮಾತೃ ಸಂಘದ ಉಪಾಧ್ಯಕ್ಷ ನಾರಾಯಣ ಸಿ ಪೆರ್ನೆ, ಬಂಟ್ವಾಳ ವಿಸ್ತೃತ ಕಟ್ಟಡ ಸಮಿತಿಯ ಉಪಾಧ್ಯಕ್ಷ ಭಾಸ್ಕರ್ ಕೊಲ್ನಾಡು ಮೊದಲಾದವರು ಭಾಗವಹಿಸಿದ್ದರು.
ಜಿಲ್ಲಾ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಕುಲಾಲ್, ಕೋಶಾಧಿಕಾರಿ ಪುಂಡರೀಕಾಕ್ಷ, ವೀರನಾರಾಯಣ ದೇವಸ್ಥಾನದ ಅಧ್ಯಕ್ಷ ಕೆ ಎಸ್ ಸುಂದರ್ ಕುಲಾಲ್, ಸೇವಾ ದಳಪತಿ ಪ್ರದೀಪ್ ಅತ್ತಾವರ, ಸದಸ್ಯರಾದ ನಾಗರಾಜ್, ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷ ಸದಾಶಿವ ಕುಲಾಲ್ ಅತ್ತಾವರ, ಕಾರ್ಯದರ್ಶಿ ಪ್ರಕಾಶ್, ಕೋಶಾಧಿಕಾರಿ ಪ್ರಸಾದ್ ಕುಲಾಲ್ ಸಿದ್ಧಕಟ್ಟೆ ಉಪಸ್ಥಿತರಿದ್ದರು.















0 comments:
Post a Comment