ಬಂಟ್ವಾಳ, ನವೆಂಬರ್ 22, 2025 (ಕರಾವಳಿ ಟೈಮ್ಸ್) : ಸೊಸೈಟಿ ಆವರಣದಲ್ಲಿ ಮೇಯಲು ಹೋಗಿದ್ದ 4 ದನಗಳನ್ನು ಕದ್ದೊಯ್ದ ಘಟನೆ ಪೆರುವಾಯಿ ಎಂಬಲ್ಲಿ ನ 19 ರಂದು ನಡೆದಿದೆ.
ಪೆರುವಾಯಿ ಗ್ರಾಮದ ಅಡಿವಾಯಿ ನಿವಾಸಿ ಗಣೇಶ್ ರೈ ಹಾಗೂ ನಾರಾಯಣ ನಾಯ್ಕ ಎಂಬವರಿಗೆ ಸೇರಿದ ತಲಾ 2 ದನಗಳು ಕಳವಾಗಿದೆ. ಗಣೇಶ ರೈ ಅವರು 2 ದನಗಳನ್ನು ನ 18 ರಂದು ಬೆಳಿಗ್ಗೆ ಮೇಯಲು ಬಿಟ್ಟಿದ್ದು ಮತ್ತು ನಾರಾಯಣ ನಾಯ್ಕ ಅವರು 2 ದನಗಳು ಮೇಯಲು ಹೋಗಿದ್ದವು. ನ 18 ರಂದು ಮೇಯಲು ಹೋದ ದನಗಳು ಸೊಸೈಟಿ ಆವರಣದಲ್ಲಿಯೇ ಇದ್ದು ಸಂಜೆ ಸಮಯ ಸೊಸೈಟಿಯ ನೌಕರರು ಗೇಟಿನ ಬೀಗ ಹಾಕಿ ಹೋಗಿದ್ದರು. 4 ದನಗಳು ಮನೆಗೆ ಬಂದಿರದೇ ಇರುವುದರಿಂದ ಗಣೇಶ್ ರೈ ಹಾಗೂ ನಾರಾಯಣ ನಾಯ್ಕ ಅವರುಗಳು ಸೊಸೈಟಿಯ ಸಿಸಿ ಟಿವಿ ದೃಶ್ಯಾವಳಿ ನೋಡಿದಾಗ ನ 19 ರಂದು ಬೆಳಿಗಿನ ಜಾವ 2.30 ರ ವೇಳೆಗೆ ಸೊಸೈಟಿಯ ಆವರಣದೊಳಗೆ ಮೂರು ಜನ ಮುಸುಕುಧಾರಿ ವ್ಯಕ್ತಿಗಳು ಸೊಸೈಟಿಯ ಗೇಟಿನ ಬೀಗ ಮುರಿದು ಅಕ್ರಮ ಪ್ರವೇಶ ಮಾಡಿ 4 ದನಗಳನ್ನು ಎಳೆದುಕೊಂಡು ಹೋಗುವುದು ಕಂಡು ಬಂದಿದೆ.
ಕಳವಾದ 4 ದನಗಳ ಒಟ್ಟು ಮೌಲ್ಯ 1.30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment