ಮಂಗಳೂರು, ನವೆಂಬರ್ 26, 2025 (ಕರಾವಳಿ ಟೈಮ್ಸ್) : ಕಾಲು ಸಂಕ ಕುಸಿತ ಸ್ಥಳಕ್ಕೆ ದೋಣಿಯಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಬುಧವಾರ ಪರಿಶೀಲನೆ ನಡೆಸಿದರು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ 54ರ ಉಳ್ಳಾಲ ಹೊಯಿಗೆ ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ಕಾಲುದಾರಿಯ ಮೂಲಕ ಸಾರ್ವಜನಿಕರು ಸಂಚರಿಸಲು ಲೋಹದ ಕಾಲು ಸಂಕವನ್ನು ಬಹಳ ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. 4 ವರ್ಷಗಳ ಹಿಂದೆ ಈ ಸಂಕ ಕುಸಿದು ಬಿದ್ದಿತ್ತು. ಈ ಪ್ರದೇಶದಲ್ಲಿ ಸುಮಾರು 300ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಕಾಲು ಸಂಕದ ಮೂಲಕ ನದಿ ಬದಿಯಲ್ಲಿ ಸಮನಾಂತರವಾಗಿ ನಡೆದು, ನಗರ ಸಂಪರ್ಕಿಸಲು ಹತ್ತಿರವಾಗಿತ್ತು. ಕಾಲು ಸಂಕ ಕುಸಿದು ಬಿದ್ದು, ಸ್ಥಳೀಯರಿಗೆ ದೈನಂದಿನ ಓಡಾಟಕ್ಕೆ ತೊಂದರೆಯಾಗಿತ್ತು. ಈ ಸಂಕವನ್ನು ದುರಸ್ತಿ ಅಥವಾ ಮರು ನಿರ್ಮಾಣ ಮಾಡಲು ಸ್ಥಳೀಯರು ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಅವರು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಅವರೊಂದಿಗೆ ಬುಧವಾರ ದೋಣಿಯಲ್ಲಿಯೇ ಕಾಲು ಸಂಕ ಇದ್ದ ಸ್ಥಳಕ್ಕೆ ತೆರಳಿ ಸಮಗ್ರವಾಗಿ ಪರಿಶೀಲಿಸಿದರು. ಕಾಲು ಸಂಕದ ಪುನರ್ ನಿರ್ಮಾಣ ಅಥವಾ ದುರಸ್ತಿಯ ಬಗ್ಗೆ ಬಗ್ಗೆ ತಾಂತ್ರಿಕ ಅಭಿಪ್ರಾಯ ಪಡೆದು ಶೀಘ್ರದಲ್ಲಿ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

















0 comments:
Post a Comment