ಪುತ್ತೂರು, ನವೆಂಬರ್ 09, 2025 (ಕರಾವಳಿ ಟೈಮ್ಸ್) : ಅಟೋ ರಿಕ್ಷಾದಲ್ಲಿ ಅಕ್ರಮ ಗಾಂಜಾ ಸಾಗಾಟ ಪ್ರಕರಣ ಬೇಧಿಸಿದ ಪುತ್ತೂರು ನಗರ ಪೊಲೀಸರು 1 ಕೆಜಿಗಿಂತಲೂ ಅಧಿಕ ಪ್ರಮಾಣದ ಗಾಂಜಾ, ತಲವಾರು ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಡಬ ತಾಲೂಕು ಸವಣೂರು ನಿವಾಸಿ ಪ್ರಸಾದ್ ಇ (35) ಎಂದು ಹೆಸರಿಸಲಾಗಿದೆ.
ನ 8 ರಂದು ಮಧ್ಯಾಹ್ನ ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಆಟೋ ರಿಕ್ಷಾ ಒಂದರಲ್ಲಿ ಪ್ರಸಾದ್ ಎಂಬಾತನು ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪುತ್ತೂರು ನಗರ ಪೆÇಲೀಸ್ ಠಾಣಾ ಪಿಎಸ್ಸೈ ಜನಾರ್ಧನ ಕೆ ಎಂ ಅವರು ಸಿಬ್ಬಂದಿಗಳೊಂದಿಗೆ ತೆರಳಿ ಸದ್ರಿ ಆಟೋ ರಿಕ್ಷಾವನ್ನು ತಡೆದು ಪರಿಶೀಲಿಸಿದಾಗ, ಸುಮಾರು 1 ಕೆಜಿ ಗಿಂತಲೂ ಮೇಲ್ಪಟ್ಟ ನಿಷೇದಿತ ಮಾದಕ ವಸ್ತು ಗಾಂಜಾ ಹಾಗೂ ಮಾರಕಾಯುಧವಾದ ಸುಮಾರು ಅಂದಾಜು 25 ಇಂಚು ಉದ್ದದ ತಲವಾರು ಪತ್ತೆಯಾಗಿದೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.















0 comments:
Post a Comment