ಮಂಗಳೂರು, ನವೆಂಬರ್ 09, 2025 (ಕರಾವಳಿ ಟೈಮ್ಸ್) : ಅಪ್ರಾಪ್ತ ಪ್ರಾಯದ ಶಾಲಾ ಬಾಲಕಿಯರಿಬ್ಬರನ್ನು ಅಟೋ ರಿಕ್ಷಾದಲ್ಲಿ ಹಿಂಬಾಳಿಸಿ ಕಿರುಕುಳ ನೀಡಿದ ಆರೋಪದಲ್ಲಿ ಚಾಲಕನ ವಿರುದ್ದ ದ ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅಟೋ ರಿಕ್ಷಾ ಚಾಲನನ್ನು ಪ್ರಸಾದ್ ಎಂದು ಹೆಸರಿಸಲಾಗಿದೆ. ಅಪ್ರಾಪ್ತ ಪ್ರಾಯದ ಬಾಲಕಿಯರಿಬ್ಬರು ಶಾಲೆಯೊಂದರಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಕೆಲವು ದಿನಗಳ ಹಿಂದೆ ಸದ್ರಿ ಇಬ್ಬರು ಬಾಲಕಿಯರು ಶಾಲೆಗೆ ತೆರಳುತ್ತಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿ ಆಟೋ ರಿಕ್ಷಾದಲ್ಲಿ ಹಿಂಬಾಲಿಸಿ ಕಿರುಕುಳ ನೀಡಿರುವುದಾಗಿದೆ. ಮುಂದುವರಿದಂತೆ ನ 8 ರಂದು ಬೆಳಿಗ್ಗೆ, ಸದ್ರಿ ಬಾಲಕಿಯರು ಶಾಲೆಗೆ ಹೋಗುತ್ತಿದ್ದಾಗ, ಅದೇ ಅಪರಿಚಿತ ವ್ಯಕ್ತಿಯು ಆಟೊ ರಿಕ್ಷಾದಲ್ಲಿ ಬಂದು ಕಿರುಕುಳ ನೀಡಿದ್ದಾನೆ. ಈ ಬಗ್ಗೆ ದ.ಕ ಮಹಿಳಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment