ಬಂಟ್ವಾಳ, ನವೆಂಬರ್ 26, 2025 (ಕರಾವಳಿ ಟೈಮ್ಸ್) : ಮನೆ ಮಂದಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಅಪರಿಚಿತನೋರ್ವ ಚಿನ್ನಾಭರಣ ಹಾಗೂ ನಗದು ಹಣ ದೋಚಿ ಪರಾರಿಯಾದ ಘಟನೆ ಸಜಿಪನಡು ಗ್ರಾಮದ ದೇರಾಜೆ ಎಂಬಲ್ಲಿ ನ 23 ರಂದು ಮಧ್ಯಾಹ್ನ ವೇಳೆ ಸಂಭವಿಸಿದೆ.
ಇಲ್ಲಿನ ನಿವಾಸಿ ದೀಕ್ಷಿತ್ (24) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ದೀಕ್ಷಿತ್ ಹಾಗೂ ಅವರ ಮನೆಯವರು ನ 23 ರಂದು ಮದುವೆ ಕಾರ್ಯಕ್ರಮದ ನಿಮಿತ್ತ ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪಕ್ಕೆ ತೆರಳಿದ್ದು, ಮಧ್ಯಾಹ್ನ 2-3 ರ ಮಧ್ಯದ ಅವಧಿಯಲ್ಲಿ ಮನೆಗೆ ಬಂದ ಅಪರಿಚಿತ ವ್ಯಕ್ತಿ ಮನೆಯಲ್ಲಿದ್ದ ಸರೋಜಿನಿ ಅವರಲ್ಲಿ ದೀಚು ಅವರು ಮನೆಯ ಕರೆಂಟ್ ವಯರ್ ಹಾಗೂ ಲೈಟ್ ರಿಪೇರಿ ಮಾಡಲು ತಿಳಿಸಿದ್ದಾನೆ ಎಂದು ಹೇಳಿ ಮನೆಯ ಒಳಗಡೆ ಬಂದು ಮನೆಯ ಬೆಡ್ ರೂಮಿನ ಮಂಚನ ಕೆಳಗೆ ಬ್ಯಾಗಿನಲ್ಲಿರಿಸಿದ್ದ ಸುಮಾರು 24 ಸಾವಿರ ರೂಪಾಯಿ ಮೌಲ್ಯದ 4 ಗ್ರಾಂ ತೂಕದ ಒಂದು ಜೊತೆ ಚಿನ್ನದ ಕಿವಿಯ ಬೆಂಡೋಲೆ, ಸುಮಾರು 18 ಸಾವಿರ ರೂಪಾಯಿ ಮೌಲ್ಯದ 3 ಗ್ರಾಂ ತೂಕದ ಉಂಗುರ ಹಾಗೂ 6 ಸಾವಿರ ರೂಪಾಯಿ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 48 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ದೀಕ್ಷಿತ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment