ಬಂಟ್ವಾಳ, ನವೆಂಬರ್ 01, 2025 (ಕರಾವಳಿ ಟೈಮ್ಸ್) : ಕನ್ನಡ ಭಾಷೆ ನಮ್ಮ ತಾಯಿ ಭಾಷೆ. ಅದಕ್ಕೆ ಸಾವಿರಾರು ವರುಷಗಳ ಇತಿಹಾಸವಿದೆ ಎಂಬುದನ್ನು ಅರಿತಿದ್ದೇವೆ. ಅದು ನಮ್ಮ ನಾಡ ಭಾಷೆ. ಅಂತಹ ಸುಂದರ ಹೆಗ್ಗಳಿಕೆಯ ಸಂಸ್ಕೃತಿಭರಿತ ಭಾಷೆಯನ್ನು ಪ್ರೀತಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯವಾಗಿದೆ. ಅದರ ಜೊತೆಗೆ ಇತರ ಭಾಷೆಗಳ ಮೇಲೆ ಗೌರವವೂ ಕನ್ನಡಿಗರಿಗಿರಲಿ. ಈ ನಿಟ್ಟಿನಲ್ಲಿ ಕನ್ನಡಿಗರೆಲ್ಲ ತಮ್ಮ ಔದಾರ್ಯ ಹಾಗೂ ಸಜ್ಜನಿಕೆಯನ್ನು ಮೆರೆದು ಭಾಷೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ನೆಲ ಜಲ ಸಂಸ್ಕೃತಿಯನ್ನು ಅರಿತು ನಡೆಯುವಂತಾಗಲಿ ಎಂದು ತುಂಬೆ ಬಿ ಎ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕಿ ಹಾಗೂ ಯುವ ಕವಯತ್ರಿ ಶ್ವೇತಾ ಹೇಳಿದರು.
ತುಂಬೆ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧ್ವಜಾರೋಹಣಗೈದ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಿ ಎಸ್ ಭಟ್ ಮಾತನಾಡಿ, ಕನ್ನಡ ನಾಡಿಗೆ ವಿದ್ಯಾಭ್ಯಾಸ-ಉದ್ಯೋಗಕ್ಕಾಗಿ ಇತರೆಡೆಗಳಿಂದ ಬರುವ ಪ್ರತಿಯೊಬ್ಬರೂ ಇಲ್ಲಿನ ತಾಯಿ ಭಾಷೆ ಕಲಿತು ಮಾತನಾಡಬೇಕು. ಆಡಳಿತ ವ್ಯವಹಾರಗಳಲ್ಲಿ ಅದನ್ನು ಬಳಸುವಂತಾಗಬೇಕು. ಅದರೊಂದಿಗೆ ಕರುನಾಡ ಮಣ್ಣಿನ ಸಂಸ್ಕೃತಿಯನ್ನು ಮನಸರಿತು ಗೌರವಿಸಬೇಕು ಎಂದರು.
ಕಾಲೇಜು ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್, ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಲ್ಲಿಕಾ ಶೆಟ್ಟಿ, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕೆ, ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಭಾಗವಹಿಸಿದ್ದರು. ಸಹಶಿ ಕ್ಷಕಿ ರೇಶ್ಮಾ ಶೆಟ್ಟಿ ವಂದಿಸಿ, ಉಪನ್ಯಾಸಕಿ ಬೇಬಿ ಕಾರ್ಯಕ್ರಮ ನಿರೂಪಿಸಿದರು.














0 comments:
Post a Comment