ಮಂಗಳೂರು ನಗರ ವ್ಯಾಪ್ತಿಯ ರಸ್ತೆಗಳ ಸಮಸ್ಯೆಗೆ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ವೇದವ್ಯಾಸ್ ಕಾಮತ್ - Karavali Times ಮಂಗಳೂರು ನಗರ ವ್ಯಾಪ್ತಿಯ ರಸ್ತೆಗಳ ಸಮಸ್ಯೆಗೆ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ವೇದವ್ಯಾಸ್ ಕಾಮತ್ - Karavali Times

728x90

12 November 2025

ಮಂಗಳೂರು ನಗರ ವ್ಯಾಪ್ತಿಯ ರಸ್ತೆಗಳ ಸಮಸ್ಯೆಗೆ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು, ನವೆಂಬರ್ 12, 2025 (ಕರಾವಳಿ ಟೈಮ್ಸ್) : ನಗರ ವ್ಯಾಪ್ತಿಯೊಳಗಿರುವ ವಿವಿಧ ರಸ್ತೆಗಳ ಸಮಸ್ಯೆಗೆ ಸಂಬಂಧಪಟ್ಟಂತೆ ಶಾಸಕ ವೇದವ್ಯಾಸ ಕಾಮತ್ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪಂಪ್ ವೆಲ್-ಉಜ್ಜೋಡಿ, ಜೆಪ್ಪು ಮಾರ್ಕೆಟ್-ಲೀವೆಲ್, ಮುಳಿಹಿತ್ಲು ಮೊದಲಾದ ಪ್ರದೇಶಗಳ ರಸ್ತೆ ಅಗಲೀಕರಣ ಕಾಮಗಾರಿಯು ತ್ವರಿತವಾಗಿ ನಡೆಯಬೇಕು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಸರ್ವಿಸ್ ರಸ್ತೆಗಳ ಬಗ್ಗೆ ಎನ್.ಎಚ್ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಚ್ಚರ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಪಂಪ್ ವೆಲ್ ನಲ್ಲಿರುವ “ಮಹಾವೀರ ವೃತ್ತ” ದ ಹೆಸರನ್ನು ತುಳುವಿನಲ್ಲೂ ಬರೆಯುವ ಬಗ್ಗೆ ಪಾಲಿಕೆಯವರು ಅಗತ್ಯ ಕ್ರಮಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ಸಂದೀಪ್ ಗರೋಡಿ, ರೇವತಿ ಶೆಟ್ಟಿ, ಮಾಜಿ ಉಪ ಮೇಯರ್ ಭಾನುಮತಿ ಪಿ.ಎಸ್, ಪಾಲಿಕೆಯ ಹಿರಿಯ ಅಧಿಕಾರಿಗಳಾದ ನರೇಶ್ ಶೆಣೈ, ನಾಗರಾಜ್, ರಾಜೇಶ್, ಭವ್ಯ, ಸ್ಮಾರ್ಟ್ ಸಿಟಿಯ ಅರುಣ್ ಪ್ರಭಾ, ಎನ್.ಎಚ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ನಗರ ವ್ಯಾಪ್ತಿಯ ರಸ್ತೆಗಳ ಸಮಸ್ಯೆಗೆ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ವೇದವ್ಯಾಸ್ ಕಾಮತ್ Rating: 5 Reviewed By: karavali Times
Scroll to Top