ಅನ್ಸಾರ್ ನಗರ ರಿಫಾಯಿಯಾ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿ 15ನೇ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ
ಉಳ್ಳಾಲ, ನವೆಂಬರ್ 25, 2025 (ಕರಾವಳಿ ಟೈಮ್ಸ್) : ತಾಲೂಕಿನ ಮಂಜನಾಡಿ-ಅನ್ಸಾರ್ ನಗರದ ರಿಫಾಯಿಯಾ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿಯ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಹೊನಲು ಬೆಳಕಿನ ದಫ್ ಸ್ಪರ್ಧೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನ 22 ರಂದು ರಾತ್ರಿ ಇಲ್ಲಿನ ಮರ್ ಹೂಂ ಶೈಖುನಾ ಮಂಜನಾಡಿ ಸಿ ಪಿ ಉಸ್ತಾದ್ ವೇದಿಕೆಯಲ್ಲಿ ನಡೆಯಿತು.
ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ದುವಾ ನೆರವೇರಿಸಿದರು. ರಿಫಾಯಿಯಾ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿ ಗೌರವಾಧ್ಯಕ್ಷ, ಅನ್ಸಾರ್ ನಗರ ಬಿಲಾಲ್ ಮಸೀದಿ ಅಧ್ಯಕ್ಷ ಹಾಜಿ ಎನ್ ಎಸ್ ಕರೀಂ ಅಧ್ಯಕ್ಷತೆ ವಹಿಸಿದ್ದರು. ಕುದುಂಬ್ಲಾಡಿ ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ ಅಲ್-ಖಾಮಿಲಿ ಉದ್ಘಾಟಿಸಿದರು. ಮಂಜನಾಡಿ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಮುಖ್ಯ ಭಾಷಣಗೈದರು.
ಇದೇ ವೇಳೆ ಪಡೀಲ್ ಜನಪ್ರಿಯಾ ಆಸ್ಪತ್ರೆ ಸಿಇಒ ಹಾಗೂ ಡೈರೆಕ್ಟರ್ ಡಾ ಕಿರಾಶ್ ಪರ್ತಿಪ್ಪಾಡಿ, ನರಿಂಗಾನ ಅಲ್-ಮದೀನಾ ಪಾಲಿಕ್ಲಿನಿಕ್ ಡೈರೆಕ್ಟರ್ ಡಾ ಮುಹಮ್ಮದ್ ಫಯಾಝ್ ಹಾಗೂ ಕುಟ್ಯಾಡಿ ಜಮೀಯ್ಯತುಲ್ ಹಿಂದ್ ಅಲ್-ಇಸ್ಲಾಮಿಯ್ಯ ಸಂಸ್ಥೆಯಿಂದ ಹಾದಿ ಬಿರುದು ಪಡೆದ ರಿಫಾಯಿಯಾ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿಯ ಹಳೆ ವಿದ್ಯಾರ್ಥಿ ಹಾಫಿಳ್ ನೌಫಲ್ ಹಾದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅನ್ಸಾರ್ ನಗರ ಬಿಲಾಲ್ ಮಸೀದಿ ಇಮಾಂ ಅಬ್ಬಾಸ್ ಸಖಾಫಿ, ನೆಕ್ಕರೆ ಮದ್ರಸ ಅಧ್ಯಕ್ಷ ಅಬ್ದುರ್ರಹ್ಮಾನ್ ಮದನಿ, ಸದರ್ ಮುಅಲ್ಲಿಂ ಝೈನುಲ್ ಆಬಿದೀನ್ ಮದನಿ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಮಲಾರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ ಎಂ ಅಶ್ರಫ್ ಪಾಣೆಮಂಗಳೂರು, ಕೊಣಾಜೆ ಪೊಲೀಸ್ ಠಾಣಾ ಪಿಎಸ್ಸೈ ನಾಗರಾಜ್, ಮುಡಿಪು ಸರ್ಕಲ್ ಕೆಎಂಜೆ ಅಧ್ಯಕ್ಷ ಹಾಜಿ ಎಸ್ ಕೆ ಖಾದರ್, ನರಿಂಗಾನ ಗ್ರಾ ಪಂ ಅಧ್ಯಕ್ಷ ನವಾಝ್, ಸದಸ್ಯ ಸಲೀಂ ಪೊಟ್ಟೊಳಿಕೆ, ಮರಿಕ್ಕಳ ಜುಮಾ ಮಸೀದಿ ಅಧ್ಯಕ್ಷ ಜಲೀಲ್ ಮೋಂಟುಗೋಳಿ, ಮಂಜನಾಡಿ ಗ್ರಾ ಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಅಸೈ, ಕೊಣಾಜೆ ಗ್ರಾ ಪಂ ಮಾಜಿ ಅಧ್ಯಕ್ಷರಾದ ನಝರ್, ಶೌಕತ್, ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಹಾಜಿ ಎನ್ ಎಂ ಅಹ್ಮದ್ ಕುಂಞÂ (ನೆಕ್ಕರೆ ಬಾವು), ಗುತ್ತಿಗೆದಾರ ನಝೀರ್ ಮದ್ದಾಡಿ, ಅನ್ಸಾರ್ ನಗರ ಬದ್ರಿಯಾ ಮದ್ರಸ ಅಧ್ಯಕ್ಷ ಮನ್ಸೂರ್ ಯು ಎಸ್, ಉಪಾಧ್ಯಕ್ಷ ಮೋನು ಕೊಳ, ಬಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ, ಎಂ ಇ ಮೊಯಿದೀನ್ ಕುಂಞÂ, ಮಂಜನಾಡಿ ಗ್ರಾ ಪಂ ಸದಸ್ಯರಾದ ಇಲ್ಯಾಸ್ ಮೇಗಿನಮನೆ, ಇಸ್ಮಾಯಿಲ್ ಬಾವು, ನೆಕ್ಕರೆ ಅಲ್-ಅಮೀನ್ ಚಾರಿಟಿ ಅಧ್ಯಕ್ಷ ಸನಾವುಲ್ಲಾ, ಮಂಜನಾಡಿ ಸರ್ಕಲ್ ಎಸ್ ವೈ ಎಸ್ ಅಧ್ಯಕ್ಷ ಮೋನು ಕಲ್ಕಟ್ಟ, ಮಂಗಳಾಂತಿ ಎಂಯುಎಂ ಅಧ್ಯಕ್ಷ ಹಮೀದ್ ಕುಚ್ಚಿಗುಡ್ಡೆ, ಉದ್ಯಮಿಗಳಾದ ಅಬ್ದುಲ್ಲ, ಹಾಜಿ ಖಲಂದರ್, ಮೋರ್ಲ ರಿಫಾಯಿಯ ಮಸೀದಿ ಅಧ್ಯಕ್ಷ ಶಂಸು, ಅನ್ಸಾರ್ ನಗರ ಎಸ್ ವೈ ಎಸ್ ಯುನಿಟ್ ಅಧ್ಯಕ್ಷ ವಹಾಬ್, ಅನ್ಸಾರ್ ನಗರ ರಿಫಾಯಿಯ ಖಿದ್ಮತುಲ್ ಇಸ್ಲಾಂ ದಫ್ ಕಮಿಟಿ ಅಧ್ಯಕ್ಷ ಸವಾದ್ ಕೊಳ, ಉಪಾಧ್ಯಕ್ಷರಾದ ಹನೀಫ್ ಹಾಜಿ ಪರಮಾಂಡ, ರಿಯಾಝ್ ಅನ್ಸಾರ್ ನಗರ, ಪ್ರಧಾನ ಕಾರ್ಯದರ್ಶಿ ರಾಶಿದ್, ಮಂಜನಾಡಿ ಸರ್ಕಲ್ ಎಸ್ ವೈ ಎಸ್ ಅಧ್ಯಕ್ಷ ಆಸಿಫ್ ಯು ಎಸ್ ಮೊದಲಾದವರು ಭಾಗವಹಿಸಿದ್ದರು.
ಅನ್ಸಾರ್ ನಗರ ಬದ್ರಿಯಾ ಮದ್ರಸ ಸದರ್ ಮುಅಲ್ಲಿಂ ಉಮರುಲ್ ಫಾರೂಕ್ ಸಖಾಫಿ ಸ್ವಾಗತಿಸಿ, ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.
ಅಲ್-ಜಝೀರಾ ತಂಡಕ್ಕೆ ಪ್ರಶಸ್ತಿ
ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕೂಟದಲ್ಲಿ ಉಳ್ಳಾಲ-ಅಕ್ಕರೆಕರೆಯ ಅಲ್-ಜಝೀರಾ ದಫ್ ತಂಡ ಪ್ರಥಮ ಸ್ಥಾನ ಪಡೆದರೆ, ರೆಂಜಾಡಿ ತಾಜುಲ್ ಹುದಾ ದಫ್ ತಂಡ ದ್ವಿತೀಯ ಸ್ಥಾನ ಹಾಗೂ ಕೂಳೂರು ಮುಹಿಯುದ್ದೀನ್ ದಫ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
























0 comments:
Post a Comment