ಕಲ್ಲು, ಮರಳು ಗಣಿಗಾರಿಕೆ : ಮಂಗಳೂರು ಸಹಾಯಕ ಆಯುಕ್ತರಿಂದ ಪರಿಶೀಲನೆ - Karavali Times ಕಲ್ಲು, ಮರಳು ಗಣಿಗಾರಿಕೆ : ಮಂಗಳೂರು ಸಹಾಯಕ ಆಯುಕ್ತರಿಂದ ಪರಿಶೀಲನೆ - Karavali Times

728x90

14 November 2025

ಕಲ್ಲು, ಮರಳು ಗಣಿಗಾರಿಕೆ : ಮಂಗಳೂರು ಸಹಾಯಕ ಆಯುಕ್ತರಿಂದ ಪರಿಶೀಲನೆ

ಮಂಗಳೂರು, ನವೆಂಬರ್ 14, 2025 (ಕರಾವಳಿ ಟೈಮ್ಸ್) : ಜಿಲ್ಲಾಧಿಕಾರಿಗಳ ಆದೇಶದಂತೆ ಈಗಾಗಲೇ ಪ್ರಾರಂಭವಾಗಿರುವ ಕಲ್ಲು/ ಮರಳು ಗಣಿಗಾರಿಕೆಯ ಬಗ್ಗೆ ನಿಗಾ ವಹಿಸಲು ಕಂದಾಯ ಇಲಾಖೆ ಹಾಗೂ ಪೆÇಲೀಸ್  ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಇದರನ್ವಯ ಸರ್ಕಾರಕ್ಕೆ ಪಾವತಿಸಬೇಕಾದ ರಾಜಸ್ವವನ್ನು ಪಾವತಿಸಿ ಕಲ್ಲು/ಮರಳು ಗಣಿಗಾರಿಕೆ ನಡೆಸಲು ಪರವಾನಿಗೆ ಪಡೆದಿರುವ ಪರವಾನಿಗೆದಾರರು ರಾಜಸ್ವ ಕಡಿಮೆ ಇದ್ದರೂ ಸಾರ್ವಜನಿಕರಿಂದ ಈ ಹಿಂದಿನ ಮೊತ್ತವನ್ನೇ ಪಡೆದು ಕಲ್ಲುಗಳನ್ನು/ ಮರಳನ್ನು ನೀಡುತ್ತಿರುವುದನ್ನು ಗಮನಿಸಲಾಗಿದೆ. 

ಈ ಬಗ್ಗೆ ಪರಿಶೀಲನಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ ಕಲ್ಲು ಮರಳು ಸಾಗಾಟವಾಗುವ ವಾಹನಗಳಲ್ಲಿ ಹೆಚ್ಚಿನ ತೂಕವುಳ್ಳ (ಓವರ್ ಲೋಡ್) ಪರಿಶೀಲಿಸುವುದು, ಪ್ರತಿದಿನಕ್ಕೆ ಪಡೆಯುವ ಪರವಾನಿಗೆಯನ್ನು ದುರುಪಯೋಗಪಡಿಸದಂತೆ ಅಂದರೆ ಎಷ್ಟು ಟ್ರಿಪ್ಪಿಗೆ ಬರವಣಿಗೆಯನ್ನು ಪಡೆದಿದೆಯೋ ಅಷ್ಟೇ ಟ್ರಿಪನ್ನು ಚಲಾಯಿಸುವಂತೆ ಸೂಚಿಸಲಾಗುತ್ತಿದೆ. ಈ ಬಗ್ಗೆ ಪ್ರತಿದಿನ ಅಂದರೆ ಮುಂಜಾನೆಯಿಂದ ತಡರಾತ್ರಿವರೆಗೂ ಪರಿಶೀಲನಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.

ಈ ಕಾರ್ಯದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಉಪ ತಹಶೀಲ್ದಾರರು, ಗ್ರಾಮ ಸಹಾಯಕರು ಹಾಗೂ ಪೆÇಲೀಸ್ ಇಲಾಖೆಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನ 14 ರಂದು ಮಂಗಳೂರು ಸಹಾಯಕ್ತೆ ಮೀನಾಕ್ಷಿ ಆರ್ಯ ಅವರು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲು, ಮರಳು ಗಣಿಗಾರಿಕೆ : ಮಂಗಳೂರು ಸಹಾಯಕ ಆಯುಕ್ತರಿಂದ ಪರಿಶೀಲನೆ Rating: 5 Reviewed By: karavali Times
Scroll to Top